Dharwad

ಧಾರವಾಡ ನವನಗರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಭಗತ್ ಸಿಂಗ್ ಮೂರ್ತಿ ಪ್ರತಿಷ್ಠಾನ….

Share

ಭಾರದ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವತಂತ್ರ ಹೋರಾಟಗಾರ ಭಗತ್ ಸಿಂಗ್ ಹುತಾತ್ಮ ದಿನವಾದ ಸೋಮವಾರದಂದು, ಧಾರವಾಡದ ನವಮಗರದಲ್ಲಿ ಭಗತ್ ಸಿಂಗ್ ಅವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ನವನಗರದ ಭಗತ್ ಸಿಂಗ್ ಯುವಕ ಮಂಡಳಿ ಹಾಗೂ ಶ್ರೀಧರ ಸಿಂಗ್ ಸಾಂಗ್ಲೀಕರ್ ಅವರ ನೇತೃತ್ವದಲ್ಲಿ ನಗರದ ಐಟಿಬಿಟಿ ವೃತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿದ್ದು, ಕ್ಷೇತ್ರದ ಶಾಸಕ ಹಾಗೂ ವಿಧಾನ ಸಭೆಯ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದವರು ಮೂರ್ತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅನವಾರಣ ಮಾಡಿದರು. ಮೂರ್ತಿ ಅನಾವರಣ ಬಳಿಕ ಮಾತನಾಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅರವಿಂದ ಬೆಲ್ಲದವರು, ದೇಶ ಪ್ರೇಮಿ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹಾಗೂ ಅಪಟ್ಟ ದೇಶ ಭಕ್ತ ಇಂದು ಹುತಾತ್ಮ ದಿನ, ಅವರ ಹೋರಾಟದ ದಾರಿಯನ್ನು ಎಲ್ಲರೂ ತಿಳಿದುಕೊಳ್ಳಬೇಕು.

ದೇಶ ಪ್ರೇಮ ಎಂದರೇನು ಎಂಬುವುದಕ್ಕೆ ಭಗತ್ ಸಿಂಗ್, ಸುಖದೇವ, ರಾಜಗುರು ಇವರ ಬಗ್ಗೆ ಈಗಿನ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಇದೇವೇಳೆ ಅವರಿ ಸನ್ಮಾನಿಸಿ ಗೌರವಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಸ್ಥಳೀಯ ಹುಬ್ಬಳ್ಳಿ‌ ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ, ಹಿರಿಯರಾದ ಮಲಿಕಾರ್ಜುನ್, ಮಂಜುನಾಥ ಹೆಬಸೂರು ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು. ‌

Tags:

error: Content is protected !!