• ಆರ್ಎಸ್ಎಸ್ ಬ್ಯಾನ್ ಚರ್ಚೆಗೆ ತೆರೆ ಎಳೆದ ಸಚಿವರು
• ಸರ್ಕಾರಕ್ಕೆ ಆರ್‌ಎಸ್‌ಎಸ್ ನಿಷೇಧಿಸುವ ಉದ್ದೇಶವಿಲ್ಲ: ಜಾರಕಿಹೊಳಿ
• ಒಳ ಮೀಸಲಾತಿ ಗೊಂದಲಕ್ಕೆ ಸಂಪುಟದಲ್ಲಿ ಪರಿಹಾರ
• ಡಿಸಿಎಂ ದೆಹಲಿ ಭೇಟಿ: ಸಿಎಂ ಹೇಳಿಕೆಗೆ ಸ್ಪಷ್ಟನೆ

ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಆರ್ಎಸ್ಎಸ್ ನಿಷೇಧದ ಕುರಿತ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಆರ್ಎಸ್ಎಸ್ ನ್ನು ಯಾರೂ ಬ್ಯಾನ್ ಮಾಡಿಲ್ಲ, ಯಾರೂ ಬ್ಯಾನ್ ಮಾಡೋಕೆ ಆಗಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿ, ಸಂಘಟನೆ ನಿಷೇಧಕ್ಕೂ ಮತ್ತು ಚಟುವಟಿಕೆ ನಿರ್ಬಂಧಕ್ಕೂ ವ್ಯತ್ಯಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸರ್ಕಾರವಾಗಲೀ ಅಥವಾ ಯಾವುದೇ ಸರ್ಕಾರವಾಗಲೀ ಆರ್ಎಸ್ಎಸ್ ಅನ್ನು ನಿಷೇಧಿಸುವ ಬಗ್ಗೆ ಎಲ್ಲೂ ಹೇಳಿಲ್ಲ. ಇದು ಅನಗತ್ಯ ಚರ್ಚೆ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದು, ಸಿಎಂ ಸಿದ್ಧರಾಮಯ್ಯ ಎರಡು ಬಜೆಟ್ ಮಂಡಿಸುವ ಬಗ್ಗೆ ಹೇಳಿದ ಬಗ್ಗೆ ಅವರನ್ನೇ ಕೇಳಬೇಕು. ಡಿಸಿಎಂ ಆರಾಮಾಗಿ ಬರಲಿ. ಅವರ ಪರವಾಗಿ ಎಲ್ಲವನ್ನು ನೋಡಿಕೊಳ್ಳಲು ನಾವಿದ್ದೇವೆ ಎಂದರು. ಅಲ್ಲದೇ ಒಳ ಮೀಸಲಾತಿ ಗೊಂದಲವನ್ನು ಪರಿಹರಿಸಲು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಸರ್ಕಾರ ಎಲ್ಲರ ಪರವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸದಿ ದಾರಿ ಹುಡುಕಲಾಗುವುದು ಎಂದರು.
