State

ಬಜೆಟ್’ನಲ್ಲಿ ಲೋಕೋಪಯೋಗಿ ಇಲಾಖೆಗೆ ಸಮರ್ಪಕ ಅನುದಾನ ನೀಡಿದ್ದಾರೆ… ಸಾಲ ಮಾಡಿ ಬಜೆಟ್‌ ಮಂಡಿಸಿದ್ದು ಇದೇ ಮೊದಲ ಬಾರಿಯಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Share

• ಸೇತುವೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ
• ಬಿಜೆಪಿ ಟೀಕೆಗೆ ಸಚಿವ ಸತೀಶ್ ತಿರುಗೇಟು
• ಐವತ್ತು ವರ್ಷದಿಂದಲೂ ಸಾಲದ ಬಜೆಟ್ ಮಂಡನೆ
• ಸಾಲ ಮಾಡದೇ ಬಜೆಟ್ ಮಂಡನೆ ಅಸಾಧ್ಯ: ಸಚಿವ ಸತೀಶ್ ಜಾರಕಿಹೊಳಿ

ಕಳೆದ ಐವತ್ತು ವರ್ಷದಿಂದ ಸಾಲ ಮಾಡಿಯೇ ಬಜೆಟ್‌ ಮಂಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಷ್ಟೇ ಸಾಲ ಮಾಡಿ ಬಜಟ್‌ ಮಂಡನೆ ಮಾಡಿಲ್ಲ. ಬಿಜೆಪಿಯವರು ಸಾಲ ಮಾಡಿಯೇ ಬಜೆಟ್‌ ಮಂಡಿಸಿದ್ದು, ಈಗ ಟೀಕೆ ಮಾಡಿದರೆ ಪ್ರಯೋಜನವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಲೋಕೋಪಯೋಗಿ ಇಲಾಖೆ ಬಜೆಟ್’ನಲ್ಲಿ ಸೇತುವೆಗಳಿಗೆ ಬೇಡಿಕೆಯಿಟ್ಟಿತ್ತು. ಅದಕ್ಕೆ ಅನುದಾನವನ್ನು ನೀಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಯಾವುದೇ ಸರ್ಕಾರಗಳು ಸೇತುವೆಗಳಿಗೆ ಅಷ್ಟಾಗಿ ಪ್ರಾಧಾನ್ಯತೆ ನೀಡಿರಲಿಲ್ಲ. ಆದರೇ, ನಮ್ಮ ಸರ್ಕಾರ ನೀಡಿದೆ. ಈ ಬಾರಿಯೂ ಅದಕ್ಕೆ ಮುಂದುವರೆಸಿದ್ದಾರೆ. ನಿಯಮಿತ ಯೋಜನೆಗಳಲ್ಲಿ ಅನುದಾನವನ್ನು ನೀಡಲಾಗಿದೆ. ಕಳೆದ ಬಾರಿಗಿಂತ ಹೆಚ್ಚಿಗೆ ನೀಡಿದ್ದಾರೆ.

ಕಳೆದ ಐವತ್ತು ವರ್ಷದಿಂದ ಸಾಲ ಮಾಡಿಯೇ ಬಜೆಟ್‌ ಮಂಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಷ್ಟೇ ಸಾಲ ಮಾಡಿ ಬಜಟ್‌ ಮಂಡನೆ ಮಾಡಿಲ್ಲ. ಬಿಜೆಪಿಯವರು ಸಾಲ ಮಾಡಿಯೇ ಬಜೆಟ್‌ ಮಂಡಿಸಿದ್ದು, ಈಗ ಟೀಕೆ ಮಾಡಿದರೆ ಪ್ರಯೋಜನವಿಲ್ಲ ಸಾಲ ಮಾಡದೇ ಬಜೆಟ್‌ ಮಂಡನೆ ಮಾಡುಲು ಸಾಧ್ಯವಿಲ್ಲ. ಬೇರೆ ರಾಜ್ಯಗಳಲ್ಲಿಯೂ ಇದೇ ಪ್ರವೃತ್ತಿ ಇದೆ. ಕೇಂದ್ರ ಸರ್ಕಾರವೂ ಸಾಲ ಮಡಿಯೇ ಬಜೆಟ್‌ ಮಂಡಿಸುತ್ತದೆ. ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ ಅಷ್ಟೇ ಎಂದರು.

Tags:

error: Content is protected !!