Belagavi

ಬೆಂಗಳೂರಿನ ರಮಜಾನ್ ಹಬ್ಬದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ ಪರಸ್ಪರ ಪ್ರೀತಿ, ವಿಶ್ವಾಸದ ಬದುಕು ಸಾರ್ಥಕ ಎಂದ ಮುಖ್ಯಮಂತ್ರಿಗಳು…

Share

ರಾಜಧಾನಿ ಬೆಂಗಳೂರಿನಲ್ಲಿ ಇಂದು ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ನಮಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾಡಿನ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಸೌಹಾರ್ದತೆಯ ಸಂದೇಶ ನೀಡಿದರು.

ಬೆಂಗಳೂರಿನಲ್ಲಿ ಈದ್ ಉಲ್ ಫೀತರ್ ಹಿನ್ನೆಲೆ ಹಮ್ಮಿಕೊಂಡ ಸಾಮೂಹಿಕ ನಮಾಜ್ ಅದಾದಲ್ಲಿ ಪಾಲ್ಗೊಂಡು ಅವರು ಕಾರ್ಯಕ್ರಮವನ್ನು ಉದ್ಧೇಶಿಸಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು.

ರಮಜಾನ್ ನಿಮಿತ್ಯ ದೇವರಲ್ಲಿ ಸಾಮೂಹಿಕವಾಗಿ ನಮಾಜ್ ಅದಾ ಮಾಡಿ, ಮನುಕುಲದ ಉದ್ಘಾರಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಮಾನವೀಯ ಮೌಲ್ಯಗಳನ್ನು ಅರಿತು ಬಾಳುವುದು ಅತ್ಯಂತ ಅವಶ್ಯ. ಪ್ರತಿಯೊಬ್ಬರು ತಮ್ಮ ಬದುಕನ್ನು ಸಾರ್ಥಕಗೊಳಿಸಲು, ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು. ಭಾರತ ದೇಶ ಹಲವಾರು ಜಾತಿ ಧರ್ಮ ಸಂಸ್ಕೃತಿಗಳಿಂದ ಕೂಡಿದ ದೇಶವಾಗಿದ್ದು, ನಾವೆಲ್ಲರೂ ಏಕತೆಯಿಂದ ಬದುಕಬೇಕಿದೆ. ಯಾವುದೇ ಧರ್ಮಗಳು ಪ್ರೀತಿಯನ್ನು ಬೋಧಿಸುತ್ತವೆಯೇ ಹೊರತು ದ್ವೇಷವನ್ನು ಬೋಧಿಸುವುದಿಲ್ಲ. ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವ ವಾತಾವರಣವನ್ನು ನಿರ್ಮಿಸಬೇಕಿದೆ ಎಂದು ಹೇಳುತ್ತ ರಮಜಾನ್ ಈದ್’ನ ಶುಭಾಷಯಗಳನ್ನು ತಿಳಿಸಿದರು. ಬೈಟ್

Tags:

error: Content is protected !!