State

ಸಾಲದ ಲೆಕ್ಕ ಆಶೋಕನಿಗೆ ಗೊತ್ತಾ?”: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಟಾಕ್ • ಸಾಲದ ಮಿತಿ ಬಗ್ಗೆ ಬಿಜೆಪಿಗೆ ತಿರುಗೇಟು

Share

• ಕೇಂದ್ರದ ಸಾಲದ ಲೆಕ್ಕಾಚಾರ ಬಿಚ್ಚಿಟ್ಟ ಸಿಎಂ
• ಯಾವುದೇ ಸಮುದಾಯದ ಓಲೈಕೆ ಮಾಡಿಲ್ಲ ಎಂದ ಸಿದ್ದರಾಮಯ್ಯ
• ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದ ಸಿಎಂ

ರಾಜ್ಯ ಸರ್ಕಾರ ಮಿತಿಮೀರಿ ಸಾಲ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಾಲದ ಮಿತಿ ಕಾಯ್ದೆಯಡಿ ರಾಜ್ಯದ ಆರ್ಥಿಕ ಸ್ಥಿತಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು ಸಾಲದ ಲೆಕ್ಕ ಆಶೋಕನಿಗೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಸಾಲದ ಕುರಿತು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅರ್ಥಿಕ ಶಿಸ್ತಿನ ಪ್ರಕಾರ ಸಾಲದ ಪ್ರಮಾಣ ಶೇ. 25ರ ಮಿತಿಯೊಳಗೆ ಇರಬೇಕು, ನಮ್ಮದು ಸದ್ಯ ಶೇ. 24ರ ಮಿತಿಯಲ್ಲಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 165 ಲಕ್ಷ ಕೋಟಿ ರೂ. ಸಾಲ ಮಾಡಿದೆ, ಈ ಲೆಕ್ಕ ಆರ್. ಆಶೋಕ್ ಅವರಿಗೆ ಗೊತ್ತಿದೆಯೇ?” ಎಂದು ಪ್ರಶ್ನಿಸಿದರು. ಜಿಎಸ್‌ಟಿ ಬದಲಾವಣೆಯಿಂದ ರಾಜ್ಯಕ್ಕೆ ನೂರು ಕೋಟಿ ರೂ. ನಷ್ಟವಾಗಿದ್ದರೂ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಬಜೆಟ್‌ನಲ್ಲಿ ಯಾವುದೇ ಸಮುದಾಯದ ಓಲೈಕೆ ಮಾಡಿಲ್ಲ, ಬದಲಾಗಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಮುಂದಿನ ಬಜೆಟ್ ಮಂಡನೆ ಮತ್ತು ತಮ್ಮ ಹುದ್ದೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರು ಇರು ಅಂದ್ರೆ ಇರುತ್ತೇನೆ, ಬಿಡು ಅಂದ್ರೆ ಬಿಡುತ್ತೇನೆ. ರಾಜ್ಯದ ಜನರ ಆಶಯದಂತೆ ನಾನು ಇನ್ನು ಎರಡು ಬಜೆಟ್ ಮಂಡಿಸಬೇಕು ಎಂಬುದು ನನ್ನ ಇಂಗಿತ, ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು” ಎಂದರು. ರೆಕಾರ್ಡ್ ಮುರಿಯುವುದು ದೊಡ್ಡ ವಿಚಾರವಲ್ಲ ಎಂದು ಹೇಳುವ ಮೂಲಕ ತಮ್ಮ ನಾಯಕತ್ವದ ಬಗ್ಗೆ ಹಬ್ಬಿರುವ ಊಹಾಪೋಹಗಳಿಗೆ ಅವರು ತೆರೆ ಎಳೆದರು.

Tags:

error: Content is protected !!