BELAGAVI

ಮಾರ್ಚ್ 29 ರಿಂದ 30ರ ವರೆಗೆ ಬೆಳಗಾವಿಯಲ್ಲಿ ಶ್ರೀ ಭಗವಾನ್ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವ

Share

ಬೆಳಗಾವಿಯ ಸಕಲ ಜೈನ ಸಮಾಜದ ವತಿಯಿಂದ ಮಾರ್ಚ್ 29 ರಿಂದ 30ರ ವರೆಗೆ ಶ್ರೀ ಭಗವಾನ್ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಜೈನ ಸಮಾಜದೊಂದಿಗೆ ಎಲ್ಲ ಸಮಾಜ ಬಾಂಧವರು ಭಾಗಿಯಾಗಬೇಕೆಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಮನವಿ ಮಾಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಧ್ಯವರ್ತಿ ಉತ್ಸವ ಸಮಿತಿಯ ವತಿಯಿಂದ ಶ್ರೀ ಭಗವಾನ್ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ನಿಮಿತ್ಯ ಮಾಧ್ಯಮಗೋಷ್ಟಿಯನ್ನು ಕರೆಯಲಾಗಿತ್ತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು, ಮಹಾವೀರ ಜನ್ಮಕಲ್ಯಾಣಕ ಕಾರ್ಯಕ್ರಮವನ್ನು ಕಳೆದ 28 ವರ್ಷಗಳಿಂದ ಸಕಲ ಜೈನ ಸಮಾಜ ಆಚರಿಸುತ್ತಿದ್ದು, 1 ವಾರದಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಕ್ತದಾನ, ಫೂಡ್ ಫೆಸ್ಟಿವಲ್, ಮಹಿಳೆಯರ ಬೈಕ್ ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ 29 ರಂದು ಪಂಜಾಬದ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರ ಉಪಸ್ಥಿತಿಯಲ್ಲಿ ಪದ್ಮಶ್ರೀ ಪಡೆದ ಡಾ. ಪ್ರಭಾಕರ ಕೋರೆ ಅವರನ್ನು ಜೈನ ಸಮಾಜದಿಂದ ಸತ್ಕರಿಸಲಾಗುವುದು. ಅದೇ ದಿನ ಮಹಿಳೆಯರ ಬೈಕ್ ರ್ಯಾಲಿಗೆ ಗುಲಾಬ್ ಚಂದ್ ಕಟಾರಿಯಾ ಅವರ ಧರ್ಮಪತ್ನಿ ಚಾಲನೆಯನ್ನು ನೀಡಲಿದ್ದಾರೆ. ಮಾರ್ಚ್ 30 ರಂದು ಟಿಳಕ ಚೌಕನಲ್ಲಿ ಮಹಾವೀರ ಜನ್ಮಕಲ್ಯಾಣಕ ಜನ್ಮ ಮಹೋತ್ಸವದ ನಿಮಿತ್ಯ ಮೆರವಣಿಗೆ ಮಹಾವೀರ ಭವನದ ವರೆಗೆ ನಡೆಯಲಿದೆ. ಜೈನ ಸಮಾಜದೊಂದಿಗೆ ಉಳಿದೆಲ್ಲ ಸಮಾಜದವರು ಕೂಡ ಇದರಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.

ಈ ವೇಳೆ ಶ್ರೀ ಭಗವಾನ್ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ಧರು.

Tags:

error: Content is protected !!