Uncategorized

ಬೆಳಗಾವಿಯಲ್ಲಿ ಸ್ಫೂರ್ತಿ ಅಸೋಸಿಯೇಶನ್‌ನಿಂದ ‘ಮೌಜ-ಮಸ್ತಿ’ ಮಹಿಳಾ ದಿನಾಚರಣೆ: ಅತಿಥಿಗಳಿಲ್ಲದೇ ವಿಭಿನ್ನವಾಗಿ ಸಂಭ್ರಮಿಸಿದ ಮಹಿಳೆಯರು

Share

ಬೆಳಗಾವಿಯ ಸ್ಫೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.ಯಾವುದೇ ವಿಶೇಷ ಅತಿಥಿಗಳ ಹಂಗಿಲ್ಲದೇ, ‘ನಮ್ಮವರಿಂದಲೇ ನಮ್ಮವರಿಗಾಗಿ’ ಎಂಬ ಶೀರ್ಷಿಕೆಯಡಿ ಮಹಿಳೆಯರು ಪೂರ್ಣ ದಿನವನ್ನು ಮೌಜ-ಮಸ್ತಿಯಲ್ಲಿ ಕಳೆದರು.

ಇಂದು ನಗರದ ಮಹಾಂತ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ‘ವರ್ಕ್ ಸ್ಯಾರಿ’ ಡ್ರೆಸ್ ಕೋಡ್‌ನೊಂದಿಗೆ ಮಿಂಚಿದರು. ಗಾಯನ, ನೃತ್ಯ ಹಾಗೂ ವಿವಿಧ ಆಟೋಟಗಳ ಮೂಲಕ ತಮ್ಮ ದಿನವನ್ನು ಸಂಭ್ರಮಿಸಿದ ಅವರು, ದೈನಂದಿನ ಒತ್ತಡದ ಜೀವನದಿಂದ ಹೊರಬಂದು ಸಖತ್ ಎಂಜಾಯ್ ಮಾಡಿದರು.

ಕಮಿಟಿ ಸದಸ್ಯರು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು. ಸಂಘದ ಅಧ್ಯಕ್ಷರಾದ ಜ್ಯೋತಿ. ಭಾವಿಕಟ್ಟಿ ಅವರು ಮಾತನಾಡಿ, “ತಮ್ಮ ಕುಟುಂಬವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರತಿಯೊಬ್ಬ ಮಹಿಳೆಯೂ ಸಾಧಕಿಯೇ. ಅದಕ್ಕಾಗಿಯೇ ನಾವು ಯಾವುದೇ ಹೊರಗಿನ ಗಣ್ಯರನ್ನು ಕರೆಯದೇ, ನಮ್ಮ ಸದಸ್ಯರನ್ನೇ ಗೌರವಿಸಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ” ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಲತಾ ಕರಡಿಗುದ್ದಿ, ರೇಷ್ಮಾ ನೇರ್ಲಿ, ಗೀತಾ ಮಲ್ಲಾಪೂರ, ಪ್ರೇಮಾ ದೇಶನೂರ, ಅನೀತಾ ಶೆಟ್ಟರ್, ಉಷಾ ಶೆಟ್ಟರ್, ಅಂಜನಾ ಹಿರೇಮಠ, ಸವೀತಾ ಕಳಸಣ್ಣ, ಅಶ್ವಿನಿ ಪಾಟೀಲ್, ಶೋಭಾ ಅಂಗಡಿ, ನಿಶಾ ಝೋಂಡ್ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು

Tags:

error: Content is protected !!