Vijaypura

ವಿಜಯಪುರ ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ; ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಾರ್ಥನೆ

Share

ಶ್ರೀ ರಾಮ ನವಮಿಯ ಪ್ರಯುಕ್ತ ಬಿಜೆಪಿ ಯುವ ಮೋರ್ಚಾವತಿಯಿಂದ ನಗರದ ಮಧಲಾ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆನಂದ ಮುಚ್ಚಂಡಿ ಮಾತನಾಡಿದರು‌. ಇದೇ ಸಮಯದಲ್ಲಿ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಸಾಧಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಹಾಗೂ 10ನೇ ತರಗತಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರೊಂದಿಗೆ ಉತ್ತೀರ್ಣರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪ್ರಪುಲ್ ಪವಾರ, ಮಂಥನ ಗಾಯಕವಾಡ, ವಿವೇಕ ತಾವರಗೇರಿ, ರಾಯಪ್ಪ ಹಳ್ಳಿ, ಗುರುರಾಜ ಜೋಶಿ, ಶಿವರಾಜ ಮಡಿವಾಳ, ವಿನೋದ ಪತ್ತಾರ, ಸಂತೋಷ ಪತ್ತಾರ, ಮನೋಜ್ ತಾಳಿಕೋಟಿ, ಬಸವರಾಜ ದಿಂಡವಾರ, ಹರೀಶ ಜೋಶಿ ಉಪಸ್ಥಿತರಿದ್ದರು.

Tags:

error: Content is protected !!