ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನೋತ್ಸವದ ಸಂಭ್ರಮ ಮನೆಮಾಡಿದೆ. ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಘಟಕದ ವತಿಯಿಂದ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ ಹಿಂದೂ ತಿಥಿಯಂತೆ ಅತ್ಯಂತ ಸಡಗರದಿಂದ ಶಿವಜಯಂತಿಯನ್ನು ಆಚರಿಸಲಾಗಿದ್ದು, ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಬೆಳಗಾವಿಯ ಶಹಾಪುರದ ಡಾಕ್ಟರ್ ಶ್ಯಾಮಾ ಪ್ರಸಾದ್ ಮುಖರ್ಜಿ ರಸ್ತೆಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಶುಕ್ರವಾರ ಬೆಳಿಗ್ಗೆಶಿವಜಯಂತಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಶಿವಸೇನೆಯ ಸಂಘಟಕ ತಾನಾಜಿ ಪಾವ್ಶೆ, ಎಸ್. ಕೆ. ಪೋಟೆ ಮತ್ತು ಉಪಜಿಲ್ಲಾ ಪ್ರಮುಖ ಬಂಡು ಕೆರವಾಡರ್ ಅವರು ಜಂಟಿಯಾಗಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಿದರು. ಮಹಾರಾಜರ ಜೈಘೋಷಗಳ ನಡುವೆ ಇಡೀ ಪರಿಸರ ಭಕ್ತಿಯ ಭಾವದಲ್ಲಿ ಮಿಂದೆದ್ದಿತು.
ಈ ಸಂಭ್ರಮದ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ಮುಖಂಡರಾದ ಉಪಶಹರ ಪ್ರಮುಖ ರಾಜು ತುಡೇಕರ್, ಉಪಶಹರ ಪ್ರಮುಖ ಪ್ರವೀಣ್ ತೇಜಮ್, ಸಿ. ಪಿ. ಧಾಡಿ, ವಿಠ್ಠಲ್ ಉಂದ್ರೆ, ಅಮರ್ ಕಡಗಾಂವ್ಕರ್, ನಾರಾಯಣ ಪಾಟೀಲ್, ಸಂಜಯ್ ಚತುರ್, ಮಯೂರೇಶ್ ಕಾಕತ್ಕರ್, ಬಾಳು ಭೋಸಲೆ, ಸ್ವರಾಜ್ ಪಾಟೀಲ್, ಸಂದೀಪ್ ಧಾಮಣೇಕರ್, ಬಾಲಕೃಷ್ಣ ಚೌಹಾಣ್ ಪಾಟೀಲ್, ವಿಕ್ರಾಂತ್ ಶಿಂಧೆ, ಸೂರಜ್ ಶಾಪೂರ್ಕರ್ ಹಾಗೂ ಗಜಾನನ ವರ್ಣೇಕರ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
