Vijaypura

ವಿಜಯಪುರದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ನೆರಳಿನ ಟೆಂಟ್ ವ್ಯವಸ್ಥೆ, ಬೇಸಿಗೆ ಬಿಸಿಲಿನ ರಕ್ಷಣೆಗಾಗಿ ಸವಾರರಿಗೆ ನೆರಳಿನ ಟೆಂಟ್ ಭಾಗ್ಯ, ಪ್ರತಿ ವರ್ಷ ಟೆಂಡರ್ ಮೂಲಕ ನೆರಳಿನ ವ್ಯವಸ್ಥೆ

Share

ಬಿಸಿಲು ನಾಡು ವಿಜಯಪುರದಲ್ಲಿ ಬೇಸಿಗೆ ಕಾಲದಲ್ಲಿ ಬಿಸಲಿನ ತಾಪ ತಡೆದು ಕೊಳ್ಳೋಕೆ ಆಗಲ್ಲ. ಅಂತಹದ್ದರಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಸವಾರರು ಬಿಸಿಲಿನಲ್ಲೆ ನಿಲ್ಲೋದು ಅಂದ್ರೆ ಸಾಕಾಗಿ ಹೋಗುತ್ತೆ. ಸವಾರರಿಗೆ ಬಿಸಿಲಿನ ತಾಪದಿಂದ ಮುಕ್ತಿ ಕಲ್ಪಿಸೋಕೆ ಮಹಾನಗರ ಪಾಲಿಕೆ ಅಧಿಕಾರಿಗಳು ನೆರಳಿನ ಭಾಗ್ಯ ನೀಡಿದ್ದಾರೆ. ನೆರಳಿನ ಭಾಗ್ಯ ಪ್ರತಿ ವರ್ಷ ಟೆಂಡರ್ ನೀಡಿ ಹಣ ಪೋಲು ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬಂದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ಟ್ರಾಫಿಕ್ ಸಿಗ್ನಲ್ ನಲ್ಲಿ ಹಾಕಿರೋ ನೆರಳಿನ ಟೆಂಟ್… ಸುಡುವ ಬಿಸಿಲಿನಲ್ಲಿ ನೆರಳಿನ ಟೆಂಟ್ ನಲ್ಲಿ ನಿಂತಿರೋ ಸವಾರರು… ಹೌದು ಪ್ರತಿ ವರ್ಷ ಬೇಸಿಗೆ ಬಂದ್ರೆ ಸಾಕು ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು ನೆರಳಿನ ಟೆಂಟ್ ಹಾಕಿಸಿರುತ್ತಾರೆ. ಒಂದೆಡೆ ನೆರಳಿನ ಟೆಂಟ್ ನಿಂದಾಗಿ ಸವಾರರಿಗೆ ಅನುಕೂಲವಾಗಿದ್ರೆ. ಮತ್ತೊಂದೆಡೆ ಮಹಾನಗರ ಪಾಲಿಕೆ ಅಧಿಕಾರಿಗಳು ಹಣ ಪೋಲು ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬಂದಿದೆ. ವಿಜಯಪುರ ನಗರದ ಬಸ್ ನಿಲ್ದಾಣ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ 2 ನೆರಳಿನ ಟೆಂಟ್, ಬಸವೇಶ್ವರ ವೃತ್ತದಲ್ಲಿ 3 ಟೆಂಟ್, ಗಾಂಧಿ ಚೌಕ್ ವೃತ್ತದಲ್ಲಿ 2 ಟೆಂಟ್ ಹಾಗೂ ಸೊಲ್ಲಾಪುರ ರಸ್ತೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಂಪರ್ಕಿಸೋ ವೃತ್ತದಲ್ಲಿ 2 ಟೆಂಟ್, ಕೋರ್ಟ್ ಸರ್ಕಲ್ ಹಾಗೂ ವಜ್ರ ಹನುಮಾನ ನಗರ ಹೀಗೆ ಒಟ್ಟು ನಗರದ 6 ಕಡೆಗಳಲ್ಲಿ ನೆರಳಿನ ಟೆಂಟ್ ಹಾಕಲಾಗಿದೆ. ಮಾರ್ಚ್ ತಿಂಗಳಿಂದ ಜೂನ್ ವರೆಗೆ ಬೇಸಿಗೆ ಕಾಲದಲ್ಲಿ ಪ್ರತಿ ವರ್ಷ ನೆರಳಿನ ಟೆಂಟ್ ಹಾಕಲಾಗುತ್ತದೆ. ನೆರಳಿನ ಟೆಂಟ್ ಹಾಕೋಕೆ ಬರೋಬ್ಬರಿ 12 ಲಕ್ಷಕ್ಕೂ ಅಧಿಕ ಮೌಲ್ಯದ ಟೆಂಡರ್ ಕೊಡಲಾಗಿದೆ. ಹೀಗೆ ಪ್ರತಿ ವರ್ಷ ಟೆಂಡರ್ ಕೊಡದೇ ನೆರಳು ಕಲ್ಪಿಸುವುದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಖರೀದಿಸಿ, ಪ್ರತಿ ವರ್ಷ ಬೇಸಿಗೆಯಲ್ಲಿ ಮಹಾನಗರ ಪಾಲಿಕೆಯಿಂದಲೇ ಟೆಂಟ್ ಹಾಕಿದ್ರೆ, ಪ್ರತಿ ವರ್ಷ ಟೆಂಡರ್ ಕೊಡುವ ಹಣ ಉಳಿಯಲಿದೆ. ಆದ್ರೆ ಮಹಾನಗರ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ನೆರಳಿನ ಟೆಂಟ್ ಟೆಂಡರ್ ನೆಪದಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ…

ಇನ್ನು ಕೇವಲ 6 ಕಡೆಗಳಲ್ಲಿ ನೆರಳಿನ ಟೆಂಟ್ ಹಾಕಲಾಗಿದೆ. ಇದಕ್ಕೆ 12 ಲಕ್ಷ ಹಣವೇಕೆ ಖರ್ಚು ಹಾಕಬೇಕು. ಅಬ್ಬಾಬ್ಬಾ ಅಂದ್ರೆ 3 ರಿಂದ 4 ಲಕ್ಷ ಖರ್ಚಾಗುತ್ತದೆ ಅನ್ನೋದು ಸ್ಥಳೀಯರು ವಾದವಾಗಿದೆ. ಇನ್ನು ಕೆಲವೆಡೆ ಟ್ರಾಫಿಕ್ ಸಿಗ್ನಲ್ ನಲ್ಲಿ ಅಗತ್ಯವಿದ್ದಲ್ಲಿ ನೆರಳಿನ ಟೆಂಟ್ ಹಾಕಿಲ್ಲ. ನಗರದ ಇಟಗಿ ಪೆಟ್ರೋಲ್ ಬಂಕ್ ಬಳಿ ಸಿಗ್ನಲ್ ನಲ್ಲಿ ಸಹಿತ ಟೆಂಟ್ ಹಾಕದೇ ಇರೋದಕ್ಕೆ ಸವಾರರು ಸಿಗ್ನಲ್ ಹಾಕಿದಾಗ ಬಿಸಿಲಿನಲ್ಲೇ ನಿಲ್ಲುವಂತಾಗಿದೆ. ನೆರಳಿನ ಟೆಂಟ್ ಭಾಗ್ಯ ಕಲ್ಪಿಸಿರೋದರ ಬಗ್ಗೆ ಸ್ಥಳಿಯರ ಸಂತಸ ವ್ಯಕ್ತಪಡಿಸುತ್ತಿದ್ದಾರೆ…

ವಿಜಯಪುರದಲ್ಲಿ ನೆರಳಿನ ಟೆಂಟ್ ನೆಪದಲ್ಲಿ ಪ್ರತಿ ವರ್ಷ ಟೆಂಡರ್ ಕೊಟ್ಟು ಹಣ ಪೋಲು ಮಾಡೋ ಬದಲಿಗೆ ಇನ್ಮೇಲಾದ್ರೂ ಟೆಂಟ್ ಸಾಮಾಗ್ರಿ ಖರೀದಿಸಿ ಮಹಾನಗರ ಪಾಲಿಕೆಯಿಂದಲೇ ಮುಂದಿನ ಬೇಸಿಗೆಯಲ್ಲಿ ಹಾಕೋದಕ್ಕೆ ಕ್ರಮ ಕೈಗೊಳ್ಳಬೇಕಿದೆ…

Tags:

error: Content is protected !!