State

ಯುದ್ಧ ಪೀಡಿತ ರಾಷ್ಟ್ರಗಳಿಂದ ಕನ್ನಡಿಗರ ಸುರಕ್ಷಿತ ವಾಪಸಾತಿ; ಕನ್ನಡಿಗರ ರಕ್ಷಣೆಗೆ ಕೇಂದ್ರದ ಗಮನ ಸೆಳೆದಿದ್ದೇವೆ

Share

ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಯುದ್ಧದ ಪರಿಸ್ಥಿತಿ ಇರುವ ರಾಷ್ಟ್ರಗಳಿಂದ ಈಗಾಗಲೇ ಎರಡು ವಿಮಾನಗಳ ಮೂಲಕ ಗಣನೀಯ ಸಂಖ್ಯೆಯ ಜನರು ರಾಜ್ಯಕ್ಕೆ ಮರಳಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆ. “ಸುಮಾರು 10 ಮಿಲಿಯನ್ ಭಾರತೀಯರು ಯುಎಇ ನಲ್ಲಿದ್ದಾರೆ. ಪ್ರವಾಸ ಅಥವಾ ಉದ್ಯೋಗ ನಿಮಿತ್ತ ಅಲ್ಲಿಗೆ ಹೋದವರನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ರಾಯಭಾರ ಕಚೇರಿಗಳು ಹಗಲಿರುಳು ಶ್ರಮಿಸುತ್ತಿವೆ,” ಎಂದು ಸಚಿವರು ಭರವಸೆ ನೀಡಿದರು.

ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಯೋಜಿಸಿರುವ ಡಿನ್ನರ್ ಮೀಟಿಂಗ್ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳು ಅಥವಾ ನಾಯಕರು ಭೋಜನಕೂಟ ಕರೆಯುವುದು ಹೊಸದೇನಲ್ಲ. ಆರು ವರ್ಷಗಳ ಕಾಲ ಕೆಪಿಸಿಸಿ ಮುನ್ನಡೆಸುವುದು ಸಾಮಾನ್ಯ ಮಾತಲ್ಲ. ಆ ಸಂತೋಷಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಎಲ್ಲರನ್ನೂ ಕರೆದಿದ್ದಾರೆ,” ಎಂದರು. ಈ ಭೋಜನಕೂಟವು ಪಕ್ಷದ ನಾಯಕರಲ್ಲಿ ಸಂಯಮ ಮತ್ತು ಒಗ್ಗಟ್ಟು ಮೂಡಿಸಲು ಸಹಕಾರಿ ಹಾಗೂ ಹೊಸ ನಾಯಕತ್ವವನ್ನು ಬೆಳೆಸುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.

Tags:

error: Content is protected !!