State

ಅರಸ್ ಕಾಲನಿಯ ಮಹಾಲಕ್ಷ್ಮೀ ನಗರದ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ವಿಧಾನ ಪರಿಷತ್ತಿನಲ್ಲಿ ಸಾಬಣ್ಣ ತಳವಾರ ಪ್ರಶ್ನೆ

Share

ಬೆಳಗಾವಿಯ ಬಸವನ ಕುಡಚಿಯ ದೇವರಾಜ್ ಅರಸ್ ಕಾಲನಿಯ ಮಹಾಲಕ್ಷ್ಮೀ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆದಿದೆ. ಕೆ.ಎಚ್.ಬಿ (KHB) ನಿರ್ಮಿತ ಬಡಾವಣೆ ಪಾಲಿಕೆಗೆ ಹಸ್ತಾಂತರಗೊಂಡರೂ ನಾಗರಿಕರಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ ಎಂಬ ಸದಸ್ಯ ಸಾಬಣ್ಣ ತಳವಾರ ಅವರ ಆರೋಪಕ್ಕೆ ಸರ್ಕಾರ ಉತ್ತರಿಸಿದೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಸಾಬಣ್ಣ ತಳವಾರ ಅವರು ಬೆಳಗಾವಿಯ ಬಸವನ ಕುಡಚಿಯ ದೇವರಾಜ್ ಅರಸ್ ಕಾಲನಿಯ ಮಹಾಲಕ್ಷ್ಮೀ ನಗರ 2020ರಲ್ಲಿ ಕೆ.ಎಚ್.ಬಿ ಯಿಂದ ನಿರ್ಮಾಣಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದ್ದರೂ, ಮೂಲಭೂತ ಸೌಕರ್ಯಗಳು ಇಲ್ಲದೇ, ನಿವಾಸಿಗಳು ತೊಂದರೆಗಿಡಾಗಿದ್ದಾರೆ ಎಂದರು.

ಇದಕ್ಕೆ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್. ಅವರು ಬಸವನ ಕುಡಚಿಯ ದೇವರಾಜ್ ಅರಸ್ ಕಾಲನಿಯ ಮಹಾಲಕ್ಷ್ಮೀ ನಗರ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟಿದೆ. ಹಸ್ತಾಂತರ ಮಾಡಿಕೊಂಡ ವೇಳೆ ಮೂಲಭೂತ ಸೌಕರ್ಯಗಳಿದ್ದವು. ಸದ್ಯ ಯುಜಿಡಿ, ರಸ್ತೆ, ವಿದ್ಯುತ್ ಮೂಲಭೂತ ಸೌಕರ್ಯಗಳಿಗೆ 1005 ಲಕ್ಷ ರೂಪಾಯಿಯ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಅನುದಾನದ ಲಭ್ಯತೆಯನುಗುಣವಾಗಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.
ಇದಕ್ಕೆ ಕೇವಲ 15 ಕೋಟಿ ನೀಡಿದರೇ ಸಾಲದು ಎಂದು ಸದಸ್ಯ ಸಾಬಣ್ಣ ತಳವಾರ ಹೇಳಿದರು. ಇದಕ್ಕೆ ಸಚಿವರಾದ ಸುರೇಶ್ ಬಿ.ಎಸ್. ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ಒಟ್ಟು 170 ಕೋಟಿ ಕೊಟ್ಟಿದ್ದು, ಕೆ ಎಚ್ ಬಿ ಬಡಾವಣೆಗೆ 15 ಕೋಟಿ ನೀಡಲಾಗಿದೆ. ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.

Tags:

error: Content is protected !!