ಧಾರವಾಡದ ಕೆಸಿಡಿ ಮೈದಾನದಲ್ಲಿ ನಡೆದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಸ್ತುತ ಸಂಸದ ಕ್ರೀಡಾಕೂಟದ ವೇಳೆ ಗಲಾಟೆ ನಡೆದಿದೆ.

ಕೆಸಿಡಿ ಮೈದಾನದಲ್ಲಿ ಫೈನಲ್ ಕುಸ್ತಿ ಪಂದ್ಯಾವಳಿಗಳು ಶುಕ್ರವಾರದಿಂದ ನಡೆಯುತ್ತಿವೆ. ಈ ಕುಸ್ತಿ ಪಂದ್ಯಾವಳಿಯಲ್ಲಿ ಇಬ್ಬರು ಪೈಲ್ವಾನರ ಮಧ್ಯೆ ಭಾರೀ ತುರುಸಿನ ಪಂದ್ಯಾವಳಿ ನಡೆದಿತ್ತು. ಕೊನೆಗೆ ಈ ಪಂದ್ಯದಲ್ಲಿ ಪೈಲ್ವಾನನೊಬ್ಬ ಗೆದ್ದ ನಂತರ ಆತ ಸೋತ ಸ್ಪರ್ಧಾಳುವಿಗೆ ಅಸಹ್ಯಕರ ಸನ್ನೆ ಮಾಡಿದ್ದೇ ಈ ಗಲಾಟೆಗೆ ಕಾರಣವಾಗಿದೆ. ಆತನ ಮಾಡಿದ ಸನ್ನೆಯಿಂದ ಕೆರಳಿದ ಸೋತ ಪೈಲ್ವಾನನ ಬೆಂಬಲಿಗರು ಆ ಕುಸ್ತಿಪಟುವಿನೊಂದಿಗೆ ಅಖಾಡದಲ್ಲೇ ವಾಗ್ವಾದಕ್ಕಿಳಿದರು. ಗೆದ್ದ ಪೈಲ್ವಾನನ ಕಡೆಯವರೂ ಅಖಾಡಕ್ಕೆ ಬಂದು ವಾಗ್ವಾದ ನಡೆಸಿದರು. ಇದರಿಂದ ಎರಡೂ ಗುಂಪಿನ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ಕೂಡ ತಲುಪಿತು ಕೊನೆಗೆ ಪೊಲೀಸರು ಎರಡೂ ಗುಂಪಿನವರನ್ನು ಚದುರಿಸಿ ಕಳುಹಿಸಿದರು. ಇದರಿಂದ ರಾತ್ರಿ ನಡೆಯಬೇಕಿದ್ದ ಪಂದ್ಯಗಳನ್ನು ಸ್ಥಗಿತಗೊಳಿಸಲಾಯಿತು.
