DEATH

ನಿವೃತ್ತ ಪ್ರಾಧ್ಯಾಪಕ ದೇಹದಾನ ಮಾಡಿ ಸಾವಿನಲ್ಲಿ ಸಾರ್ಥಕತೆ!

Share

ಶಹವುನಗರ ನಿವಾಸಿ,ನಿವೃತ್ತ ಜೀವಶಾಸ್ತ್ರ ಪ್ರಾಧ್ಯಾಪಕರು ಎಚ್ ಎಸ್ ಕೊತ್ತಂಬರಿ ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ ಡಾ.ಶಂಕರ ಗುರುಸಿದ್ದಪ್ಪ ಜಿಗಜಿನ್ನಿ (86)Msc.,Ph.D.
ನಿನ್ನೆ ನಿಧನರಾಗಿದ್ದಾರೆ.(29.3.2026)
ಮೃತರ ಅಂತಿಮ ಇಚ್ಛೆಯಂತೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಬೈಲಹೊಂಗಲ ಮುಖಾಂತರ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಕೆಎಲ್‌ಇ ಜವಾಹರಲಾಲ ನೆಹರು ಮೆಡಿಕಲ ಕಾಲೇಜಿಗೆ (JNMC) ದೇಹವನ್ನು ದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಡಾ.ಮಹಾಂತೇಶ ರಾಮಣ್ಣವರ ಕಾರ್ಯದರ್ಶಿ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಅವರು ದೇಹದಾನ ಮಾಡಿದ ಜಿಗಜಿನ್ನಿ
ಕುಟುಂಬದ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.ಮೃತರಿಗೆ ಪತ್ನಿ, ಇಬ್ಬರು ಪುತ್ರರು (ಉದಯ, ಸಂಜು)ಓರ್ವ ಪುತ್ರಿ (ರಜನಿ ಸುರೇಶ್ ಮೈಸೂರು) ಹಾಗೂ ಮೊಮ್ಮಕ್ಕಳು ಅಗಲಿದ್ದಾರೆ.

Tags:

error: Content is protected !!