Bagalkot

ಕರ್ತವ್ಯದ ನಡುವೆ ಧಾರ್ಮಿಕತೆ: ಶ್ರೀಶೈಲ ಪಾದಯಾತ್ರಿಗಳಿಗೆ ಮಜ್ಜಿಗೆ, ಹಣ್ಣು ವಿತರಿಸಿ ಜನಮನ ಗೆದ್ದ ಎಸ್ಪಿ ದಂಪತಿ

Share

ಖಾಕಿ ಸಮವಸ್ತ್ರದ ಹಿಂದೆ ಒಂದು ಮೃದುವಾದ ಮಾನವೀಯ ಹೃದಯವಿರುತ್ತದೆ ಎಂಬುದನ್ನು ಬಾಗಲಕೋಟೆ ಎಸ್ಪಿ ಸಿದ್ದಾರ್ಥ್ ಗೊಯಲ್ ದಂಪತಿ ಸಾಬೀತುಪಡಿಸಿದ್ದಾರೆ. ಕಠಿಣ ಪೊಲೀಸ್ ಕರ್ತವ್ಯದ ನಡುವೆಯೂ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟ ಭಕ್ತಾದಿಗಳಿಗೆ ಅವರು ನೀಡಿದ ಈ ವಿಶೇಷ ವರದಿ ಇಲ್ಲಿದೆ ನೋಡಿ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೊಯಲ್ ಅವರು ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ವಿಶಿಷ್ಟ ಧಾರ್ಮಿಕ ಮತ್ತು ಮಾನವೀಯ ಸೇವೆಯ ಮೂಲಕ ಸುದ್ದಿಯಾಗಿದ್ದಾರೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದ ಮೂಲಕ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸುತ್ತಿರುವ ಸಾವಿರಾರು ಭಕ್ತಾದಿಗಳಿಗೆ ಎಸ್ಪಿ ಸಿದ್ದಾರ್ಥ್ ಗೊಯಲ್ ಹಾಗೂ ಅವರ ಪತ್ನಿ ಸ್ವತಃ ಮಜ್ಜಿಗೆ, ಬಾಳೆಹಣ್ಣು ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸುಡುಬಿಸಿಲಿನಲ್ಲಿ ಮೈಲುಗಟ್ಟಲೆ ನಡೆಯುವ ಪಾದಯಾತ್ರಿಗಳ ಆಯಾಸ ನೀಗಿಸಲು ಈ ದಂಪತಿಗಳು ರಸ್ತೆಗೆ ಇಳಿದು ತಾವೇ ಮುಂದೆ ನಿಂತು ಸೇವೆ ಸಲ್ಲಿಸಿದ್ದು, ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.ಪಾದಯಾತ್ರಿಗಳ ಕ್ಷೇಮ ವಿಚಾರಿಸುತ್ತಾ ಸಿದ್ದಾರ್ಥ್ ಗೊಯಲ್ ಅವರು ಭಕ್ತರಿಗೆ ಧೈರ್ಯ ತುಂಬಿದ ಈ ಕ್ಷಣಗಳು ಜಿಲ್ಲೆಯಾದ್ಯಂತ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒಬ್ಬ ಉನ್ನತ ಅಧಿಕಾರಿಯಾದಾಗ್ಯೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ದಂಪತಿ ಸಮೇತವಾಗಿ ಈ ರೀತಿ ಭಕ್ತರ ಸೇವೆಯಲ್ಲಿ ತೊಡಗಿದ್ದು ನಿಜಕ್ಕೂ ಮಾದರಿಯಾಗಿದೆ.

Tags:

error: Content is protected !!