ಖಾನಾಪೂರ ತಾಲೂಕಿನ ಖಾನಾಪೂರ ಪಟ್ಟಣ ಸೇರಿದಂತೆ ನಂದಗಡ, ಬೀಡಿ ಬೇಕವಾಡ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪೆಟ್ರೋಲ್ ಡೀಸೆಲ್ ಪಡೆಯಲು ಜನಸಾಮಾನ್ಯರು ಮುಗಿಬಿದ್ದಿರುವುದು ಸಾಮಾನ್ಯವಾಗಿದೆ ಇರಾನ್ ಮತ್ತು ಇಸ್ರೇಲಿನ ಯುದ್ಧ ಬಿಸಿ ಜಾಗತೀಕ ಮಟ್ಟದಲ್ಲಿ ಬಿದ್ದಿದ್ದು ಇನ್ನೂ ಮುಂದೆ ಪೆಟ್ರೋಲ್ ಡೀಸೆಲ್ ಸಿಗುವುದಿಲ್ಲ ಮತ್ತು ತೈಲ ಬೆಲೆ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ತಿಳಿದು ಸಾರ್ವಜನಿಕರು ತಮ್ಮ ವಾಹನಗಳಿಗೆ ಅದರಂತೆಯೇ ಹೆಚ್ಚು ಸಂಗ್ರಹ ಮಾಡಿಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಪಂಪ್ ಗಳಲ್ಲಿ ಜಾತ್ರೆಯಂತೆ ಮುಗಿಬಿದ್ದ ಸನ್ನಿವೇಶ ಖಾನಾಪೂರ ತಾಲೂಕಿನ ಪೆಟ್ರೋಲ್ ಪಂಪ್ ಗಳಲ್ಲಿ ನಡೆಯುತ್ತಿದೆ ಪೆಟ್ರೋಲ್, ಡಿಸೆಲ್ ನಿಜಕ್ಕೂ ಬರುವುದಿಲ್ಲವೋ ಅಥವಾ ಇದು ಗಾಳಿ ಸುದ್ದಿಯೂ ಸಾರ್ವಜನಿಕರಿಗೆ ತಾಲೂಕಾ ಆಡಳಿತದ ವತಿಯಿಂದ ಸ್ಪಷ್ಟ ಪಡಿಸಿ ಸಾರ್ವಜನಿಕ ವಲಯದಲ್ಲಿ ಆಗುತ್ತಿರುವ ಈ ಬೆಳವಣಿಗೆ ಬ್ರೆಕ್ ಹಾಕಬೇಕಾಗಿದೆ.
