ಪೊಲೀಸ್ ಸೇವೆಯಲ್ಲಿ ಶಿಸ್ತು ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿ ಜಾತಿ ವ್ಯವಸ್ಥೆಯಿದ್ದು, ದೀನ ದಲಿತರ, ಅಶಕ್ತರು ಹಾಗೂ ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಿತು. ತೆರೆದ ವಾಹನದಲ್ಲಿ ಪಥಸಂಚಲನವನ್ನು ವಿಕ್ಷೀಸಿದ ಸಿದ್ಧರಾಮಯ್ಯನವರಿಗೆ ವಿವಿಧ ಪಡೆಗಳು ಗೌರವ ವಂದನೆಯನ್ನು ಸಲ್ಲಿಸಿದವರು.

ನಂತರ ಸಮಾರಂಭವನ್ನು ಉದ್ಧೇಶಿಸಿ ಎಲ್ಲರಿಗೂ ವೃತ್ತಿಪರ ಯಶಸ್ಸನ್ನು ಕೋರಿ ಶುಭ ಹಾರೈಸಿದ ಬಳಿಕ ಸಿಎಂ ಸಿದ್ಧರಾಮಯ್ಯ ಮಾತನಾಡಿದರು. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತಾದಾಗ ಮಾತ್ರ, ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಿಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ತರಬೇತಿಯಲ್ಲಿ ಕಲಿತಿದ್ದನ್ನು ಜ್ಞಾಪಕವಿಟ್ಟುಕೊಂಡು ಜೀವನದಲ್ಲಿ ಪಾಲಿಸಬೇಕು. ತರಬೇತಿಗಳು ಆಗಾಗ್ಗೆ ನಡೆಯಬೇಕಲ್ಲದೆ ತರಬೇತಿ ಜೀವನದ ಅಂಗವಾಗಬೇಕು. 377 ಸಬ್ ಇನ್ಸ್ಪೆಕ್ಟರ್ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದು, ಖಾಲಿಯಿದ್ದ 4,911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಖಾಲಿ ಇರುವ 8,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ ಎಂದು ಸಿಎಂ ಭರವಸೆ ನೀಡಿದರು. ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಮಾರ್ಕೆಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಂತೋಷ್ ದಯಾನಂದ ಸತ್ಯನಾಯಕ , ಬೆರಳಚ್ಚು ಘಟಕದ ಹೆಡ್ ಕಾನ್ಸ್ ಟೇಬಲ್ ಬಾಹುಬಲಿ ಅನಗಾಲೆ , ಡಿಎಸ್ಪಿ ರಾಘವೇಂದ್ರ ಹವಾಲ್ದಾರ್, ಖಾನಾಪೂರ ಠಾಣೆಯ ಕಾನ್ಸ್ಟೇಬಲ್ ಜಗದೀಶ್ ಕಾದ್ರೋಳ್ಳಿ,ವಿಜಯಪುರದ ಡಿ ಎಸ್ ಪಿ ತುಳಜಪ್ಪ ಸುಲ್ಪಿ , ಬಸವನ ಬಾಗೇವಾಡಿ ಡಿ.ಎಸ್.ಪಿ, ಬಾಳಪ್ಪ ನಂದಗಾವಿ, ಸಿಂದಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್,ಶ್ರೀಕಾಂತ್ ಕಾಂಬಳೆ, ಮನಗೂಳಿ ಪೊಲೀಸ್ ಠಾಣೆ ಸಿಪಿಸಿ 1708 ರಾಮನಗೌಡ ಬಿರಾದಾರ, ಗಾಂಧಿಚೌಕ ಪೊಲೀಸ್ ಠಾಣೆ ಸಿಪಿಸಿ 1823, ಚಿದಾನಂದ ಗಿಡಗಂಚಿ ಸೇರಿದಂತೆ ಹಲವರಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು.
