BELAGAVI

ಬೆಳಗಾವಿಯಲ್ಲಿ ಪೆಟ್ರೋಲ್ ವದಂತಿ ಕಿಚ್ಚು: ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ, ಆತಂಕ ಬೇಡ ಎಂದ ಫಿರೋಜ್ ಸೇಠ್!

Share

ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಪೆಟ್ರೋಲ್ ಅಭಾವ ಸೃಷ್ಟಿಯಾಗಲಿದೆ ಎಂಬ ಒಂದೇ ಒಂದು ಸುಳ್ಳು ಸುದ್ದಿ ಈಗ ಸಾರ್ವಜನಿಕರ ನಿದ್ದೆಗೆಡಿಸಿದೆ. ಸೋಮವಾರ ರಾತ್ರಿಯಿಂದಲೇ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಸಾಲು ಕಿಲೋಮೀಟರ್‌ಗಟ್ಟಲೆ ನಿಂತಿದ್ದು, ಶನಿವಾರ ಮಧ್ಯಾನ್ಹವಾದರೂ ಜನರ ಸಂಖ್ಯೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ವದಂತಿ ನಂಬಿ ಜನ ಆತಂಕಕ್ಕೆ ಒಳಗಾಗಿರುವುದು ಕಂಡುಬಂದಿದೆ.

ಬೆಳಗಾವಿ ನಗರದ ಹಲವೆಡೆ ಪೆಟ್ರೋಲ್ ಪಂಪ್‌ಗಳು ಬಂದ್ ಆಗಿದ್ದು, ಕೆಲವೇ ಕೆಲವು ಕಡೆ ಮಾತ್ರ ಇಂಧನ ಪೂರೈಕೆಯಾಗುತ್ತಿದೆ. ಇದರಿಂದಾಗಿ ತೆರೆದಿರುವ ಬಂಕ್‌ಗಳ ಮುಂದೆ ಸಾರ್ವಜನಿಕರು ಇಂಧನಕ್ಕಾಗಿ 2-3 ಗಂಟೆಗಳಿಂದ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇಂಧನ ಖಾಲಿಯಾಗುವ ಭೀತಿಯಲ್ಲಿ ಜನ ಮುಗಿಬೀಳುತ್ತಿದ್ದು, ವಾಹನಗಳ ದಟ್ಟಣೆ ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಒಂದು ಸಂದೇಶ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಪೆಟ್ರೋಲ್ ಸಿಗುವುದಿಲ್ಲ ಎಂಬ ಭಯದಿಂದ ಜನರು ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಬಾಟಲಿ ಮತ್ತು ಬ್ಯಾರಲ್‌ಗಳಲ್ಲಿ ಅಪಾರ ಪ್ರಮಾಣದ ಇಂಧನ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದಾಗಿ ತುರ್ತು ಕೆಲಸಗಳಿಗೆ ಹೋಗುವವರು ಹಾಗೂ ನಿಜವಾಗಿ ಇಂಧನದ ಅಗತ್ಯವಿರುವವರು ಪಂಪ್‌ಗಳ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪೆಟ್ರೋಲ್ ಪಂಪ್ ಸಿಬ್ಬಂದಿಗಳು ಕೂಡ ಜನರ ಈ ವರ್ತನೆಯಿಂದ ಕಂಗೆಟ್ಟಿದ್ದಾರೆ. “ನಗರದಲ್ಲಿ ಪೆಟ್ರೋಲ್ ಕೊರತೆಯಿಲ್ಲ, ಎಲ್ಲರಿಗೂ ಇಂಧನ ಸಿಗಲಿದೆ ಎಂದು ಎಷ್ಟು ಹೇಳಿದರೂ ಜನರು ಕೇಳುತ್ತಿಲ್ಲ. ಅನಗತ್ಯ ಆತಂಕ ಸೃಷ್ಟಿಸಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದ್ದಾರೆ” ಎಂದು ಸಿಬ್ಬಂದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜನದಟ್ಟಣೆ ಹೆಚ್ಚಾದಂತೆ ಬಂಕ್‌ಗಳ ಬಳಿ ಸಣ್ಣಪುಟ್ಟ ಮಾತಿನ ಚಕಮಕಿಗಳೂ ವರದಿಯಾಗುತ್ತಿವೆ.

ಬೆಳಗಾವಿಯ ಹಲವೆಡೆ ಪೆಟ್ರೋಲ್ ಪಂಪ್’ಗಳು ಬಂದ್ ಆಗಿವೆ. ಕೆಲವೆಡೆ ಮಾತ್ರ ಪೆಟ್ರೋಲ್ ಪಂಪ್’ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಜನರಿಗೆ ವಿನಾಃಕಾರಣ ತೊಂದರೆಗಳಾಗುತ್ತಿವೆ. 2-3 ಗಂಟೆಗಳಿಂದ ಕಾಯುತ್ತ ಸರತಿಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಸುಮ್ಮನೆ ಆತಂಕಕ್ಕೊಳಗಾಗಿ ಸಮಸ್ಯೆಯನ್ನು ಸೃಷ್ಠಿಸುತ್ತಿದ್ದಾರೆಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.

ಸೋಷಿಯಲ್ ಮಿಡೀಯಾದಲ್ಲಿ ಬಂದ ಸಂದೇಶದಿಂದ ಜನರಲ್ಲಿ ಆತಂಕ ಎದುರಾಗಿದೆ. ಪೆಟ್ರೋಲ್ ವ್ಯತ್ಯಯಕ್ಕೆ ಹೆದರಿ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಾಟಲಿ ಬ್ಯಾರೇಲ್ ಎಲ್ಲವನ್ನು ಹೊತ್ತು ತಂದಿದ್ದಾರೆ. ಇದರಿಂದ ತುರ್ತು ಪರಿಸ್ಥಿತಿಗೆ ಪೆಟ್ರೋಲ್ ಬೇಕಾದವರು ಕೂಡ ಪರದಾಡುವಂತಾಗಿದೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡರು.

ಇನ್ನು ಪೆಟ್ರೋಲ್ ಪಂಪಿನ ಸಿಬ್ಬಂದಿಗಳು ಯಾವುದೇ ಪೆಟ್ರೋಲ್ ಕೊರತೆಯಿಲ್ಲ. ಜನರಲ್ಲಿ ಕೇವಲ ಆತಂಕ ಎದುರಾಗಿದೆ. ಎಷ್ಟು ಹೇಳಿದರೂ ಕೇಳುತ್ತಿಲ್ಲವೆಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಜನರು ಭಯ ಪಡುವ ಅವಶ್ಯಕತೆಯಿಲ್ಲ. ದೇಶದಲ್ಲಿ ಮತ್ತು ಬೆಳಗಾವಿಯಲ್ಲಿ ಯಾವುದೇ ಪೆಟ್ರೋಲ್ ಕೊರತೆಯಿಲ್ಲ. ಜನರು ಊಹಾಪೋಹಗಳನ್ನು ನಂಬಿ ಆತಂಕಕ್ಕಿಡಾಗಬಾರದು. ಪ್ರತಿನಿತ್ಯದಂತೆ ಸಾಮಾನ್ಯವಾಗಿ ಪೆಟ್ರೋಲ್ ಭರಿಸಿಕೊಂಡು ನಿರ್ಭಯವಾಗಿರಿ. ಕಂಪನಿಯ ಅಧಿಕಾರಿಗಳು ಕೂಡ ಯಾವುದೇ ವ್ಯತ್ಯಯವಿಲ್ಲ ಎಂದು ತಿಳಿಸಿದ್ದಾರೆಂದು ಪೆಟ್ರೋಲ್ ಉದ್ಯಮಿಗಳು ಮತ್ತು ಮಾಜಿ ಶಾಸಕರಾದ ಆಸೀಫ್ ಸೇಠ್ ಹೇಳಿದರು.

Tags:

error: Content is protected !!