ಹುಕ್ಕೇರಿ ತಾಲೂಕಿನ ಸರಕಾರಿ ಶಾಲೆಗಳನ್ನು ಡಿಜಟಲಿಕರಣ ಮಾಡುವದು ನಮ್ಮ ಅಂಗ ಸಂಸ್ಥೆಗಳ ಉದ್ದೇಶವಾಗಿದೆ ಎಂದು
ಆನ್ ಲಾಯಿನ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಲಿಮಿಟೆಡ ಕೋ ಫೌಂಡರ ಶಿವಾನಂದ ಮಹಾಶೇಟ್ಟಿ ಹೇಳಿದರು.


ಹುಕ್ಕೇರಿ ನಗರದಲ್ಲಿ ಆನ್ ಲೈನ್ ಇನ್ಸ್ಟ್ರುಮೆಂಟ್ಸ್ ಇಂಡಿಯಾ ಲಿಮಿಟೆಡ್ ಮತ್ತು ಬಿ ಜಿ ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ಕಬ್ಬೂರ ಇವರ ಕಾರ್ಪೋರೇಟ ಸಾಮಾಜಿಕ ಜವಾಬ್ದಾರಿ ಪ್ರಯುಕ್ತ ಹುಕ್ಕೇರಿ ತಾಲೂಕಿನ ಕನ್ನಡ ಸರಕಾರಿ ಐವತ್ತು ಶಾಲೆಗಳಿಗೆ ಉಚಿತವಾಗಿ ಡಿಜಿಟಲ್ ಶಿಕ್ಷಣ ಉಪಕರಣಗಳು,ಶಾಲಾ ಕೋಠಡಿಗಳ ನವಿಕರಣ, ಶುಧ್ದ ಕುಡಿಯುವ ನೀರಿನ ಘಟಕ, ಪೀಠೊಪಕರಣಗಳು ಮತ್ತು ಆಟೋಪಕರಣಗಳ ವಿತರಣಾ ಸಮಾರಂಭ ಜರುಗಿತು.

ಪಟ್ಟಣದ ವಿಶ್ವರಾಜ ಭವನದಲ್ಲಿ ಜರುಗಿದ ಸಮಾರಂಭವನ್ನು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ಚರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಗಾವಿ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕ ನಿರ್ದೆಶಕ ರಮೇಶ ಕತ್ತಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಪ್ರಕಾಶ ಬೆಲ್ಲದ,ಮಹಾವೀರ ನಿಲಜಗಿ, ರಾಜೇಶ್ವರಿ ಮಹಾಶೇಟ್ಟಿ, ಸುರೇಶ ಬೆಲ್ಲದ, ಸಂದೀಪ ಹಿರೇಮಠ, ಉಪಸ್ಥಿತರಿದ್ದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ ಸಾವಿರಾರು ಕೋಟಿಯ ಆಸ್ತಿ ಹೊಂದಿದ ಈ ಭಾಗದ ಸುಪುತ್ರರಾದ ಮಹೇಶ ಬೆಲ್ಲದ ಮತ್ತು ಶಿವಾನಂದ ಮಹಾಶೆಟ್ಟಿ ಯವರು ತಮ್ಮತನವನ್ನು ಮರೇತು ತಾವು ಸಂಪಾದಿಸಿದ ಹಣದಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ ಮಾಡಲು ಇಂದು ಒಂದು ಕೋಟಿ ರೂಪಾಯಿಗಳ ಉಪಕರಣಗಳನ್ನು ಸರಕಾರಿ ಶಾಲೆಗಳಿಗೆ ನಿಡುತ್ತಿರುವದು ಅವರ ದೋಡ್ಡತನ ಎತ್ತಿ ತೋರಿಸುತ್ತದೆ ಎಂದರು.

ನಂತರ ಇತ್ತಿಚಿಗೆ ಯು ಪಿ ಎಸ್ ಸಿ ಪರಿಕ್ಷೆಯಲ್ಲಿ ಉತ್ತಿರ್ಣರಾದ ಕಿರಣ ಕಮತೆ ಮತ್ತು ಬಸವರಾಜ ಪಾಟೀಲ ಇವರನ್ನು ಸತ್ಕರಿಸಿ ಅಭಿನಂದಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಆನ್ ಲೈನ್ ಇನ್ಸ್ಟ್ರುಮೆಂಟ್ಸ್ ಕಂಪನಿ ಕೋ ಫೌಂಡರ ಶಿವಾನಂದ ಮಹಾಶೆಟ್ಟಿ ನಾವು ಕೋಡಮಾಡುವ ತಂತ್ರಜ್ಞಾನ ಆಧಾರಿತ ಉಪಕರಣಗಳನ್ನು ಕೇವಲ ಸರಕಾರಿ ಶಾಲೆಗಳಿಗೆ ಮಾತ್ರ ನಿಡುತ್ತಿದ್ದೆವೆ ನಾವು ಈ ಭಾಗದ ಸರಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿದ್ದರಿಂದ ಹುಕ್ಕೇರಿ, ಚಿಕ್ಕೋಡಿ ಭಾಗದ ಶಾಲೆಗಳಿಗೆ ಉಚಿತವಾಗಿ ನಿಡುತ್ತಿದ್ದು ಬರುವ ದಿನಗಳಲ್ಲಿ ರಾಜ್ಯಾದ್ಯಾಂತ ನಿಡುವ ಉದ್ದೇಶ ಹೊಂದಿದ್ದೆವೆ ಎಂದರು
ನಂತರ ಗಣ್ಯರು ಸುಮಾರು ಐವತ್ತು ಶಾಲೆಗಳಿಗೆ ಎ ಐ ತಂತ್ರಜ್ಞಾನ ಆಧಾರಿತ ಇಂಟರಾಕ್ಟಿವ ಬೋರ್ಡ್ ಗಳನ್ನು ಎಸ್ ಡಿ ಎಂ ಸಿ ಸದಸ್ಯರ ಸಮ್ಮುಖದಲ್ಲಿ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.

ಮಹೇಶ ಬೆಲ್ಲದ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕಳೆದ ಎಳೆಂಟು ವರ್ಷಗಳಿಂದ ಹುಕ್ಕೇರಿ, ಚಿಕ್ಕೋಡಿ, ರಾಯಭಾಗ, ಮೂಡಲಗಿ ತಾಲೂಕಿನ ಸರಕಾರಿ ಶಾಲೆಗಳಿಗೆ ಇಂಟರಾಕ್ಟಿವ ಬೋರ್ಡ್ ಜೋತೆಗೆ ಶಾಲಾ ಉಪಕರಣಗಳನ್ನು ನೀಡುತ್ತಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಒಳ್ಳೆಯ ನಾಗರಿಕರಾಗ ಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಮಹಾಶೆಟ್ಟಿ, ಅನಿತಾ ಬೆಲ್ಲದ, ಸಂದೀಪ ಮಹಾಶೆಟ್ಟಿ, ಶ್ರೇಯಸ್ಸ ಸಂಪಗಾಂವಿ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಎ ಎಸ್ ಪದ್ಮಣ್ಣವರ, ಎಂ ಡಿ ಬಡಿಗೇರ ಸೇರಿದಂತೆ ವಿವಿಧ ಶಾಲಾ ಮುಖ್ಯೋಪಾಧ್ಯಾಯರು, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿವಾನಂದ ಮಹಾಶೆಟ್ಟಿ ಮತ್ತು ಮಹೇಶ ಬೆಲ್ಲದ ರವರ ಶಾಲಾ ದಿನದ ಸ್ನೆಹಿತರು ಉಪಸ್ಥಿತರಿದ್ದರು.

