Dharwad

ಧಾರವಾಡ ಹಳಿಯಾಳ‌ ರಸ್ತೆಯ ಬಣದೂರು ನಾಕಾ ಬಳಿ ಬೈಕ್ ಅಪಘಾತ, ಓರ್ವ ಸಾವು.

Share

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ದಾರುಣವಾಗಿ ಸಾವನಪ್ಪಿದ್ದು, ಮತ್ತೋರ್ವನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಹಳಿಯಾಳ ರಸ್ತೆಯ ಬಣದೂರು ನಾಕಾ ಬಳಿಯ ನಡೆದಿದೆ.

ಧಾರವಾಡ ಕಮಲಾಪುರದ ಚಂದ್ರು ಅಪಘಾತದಲ್ಲಿ ಸಾವನ್ನಪ್ಪಿದ್ದು ಯುವಕನೆಂದು ಗುರುತಿಸಲಾಗಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಇಬ್ಬರೂ ಬೈಕ್ ತೆಗೆದುಕೊಂಡು ಧಾರವಾಡ ಕಡೆಗೆ ಬರುತ್ತಿದ್ದ ವೇಳೆ ಅತೀ ಜೋರಾಗಿ ಬಂದ ಬೈಕ್ ಸವಾರ ರಸ್ತೆ ಪಕ್ಕ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸದ್ಯ ಈಗ ಮೃತ ಯುವಕನ‌ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ತೆಗರ ರವಾನಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!