Hukkeri

ಹುಕ್ಕೇರಿ : ರಕ್ತ ದಾನ ಶಿಬಿರ ಹಮ್ಮಿಕೊಂಡು ಹುಟ್ಟು ಹಬ್ಬ ಆಚರಿಸಿಕೊಂಡ ನವೀನ ಗಂಗರಡ್ಡಿ

Share

ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಶ್ರೀಮತಿ ಗೋದಾಬಾಯಿ ಕರನಿಂಗ ಮೆಮೋರಿಯಲ್ ಫೌಂಡೇಶನ್ ಹಾಗೂ ನಿಖಿಲ್ ಸ್ಪೋರ್ಟ್ಸ್‌ ಕ್ಲಬ್ ಸಂಸ್ಥಾಪಕ ನವೀನ ಗಂಗರೆಡ್ಡಿ ಯವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದವರು ರಕ್ತದಾನ ಶಿಬಿರ ಹಮ್ಮಿಕೊಂಡು ಸುಮಾರು ನೂರಕ್ಕಿಂತ ಹೆಚ್ಚು ಯುವಕರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು.

 

ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯವಾದಿ ಮತ್ತು ನೋಟರಿ ವಿಕ್ರಮ ಕರನಿಂಗ ಬೆಳಗಾವಿ ಬೀಮ್ಸ ಆಸ್ಪತ್ರೆ ಸಹಯೋಗದೊಂದಿಗೆ ಇಂದು ಸಂಕೇಶ್ವರ ನಗರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ನೂರಾರು ಯುವಕರು ರಕ್ತದಾನ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಅವರಿಗೆ ನಮ್ಮ ಸಂಸ್ಥೆಗಳ ಪರವಾಗಿ ಅಭಿನಂದನೆ ಸಲ್ಲಿಸಲಾಗುವದು ಹಾಗೂ ಇದಕ್ಕೆ ಕಾರಣರಾದ ನವೀನ ಗಂಗರಡ್ಡಿ ಯವರಿಗೆ ಶುಭವಾಗಲಿ ಎಂದರು.

ನಂತರ ರಕ್ತದಾನ ಮಾಡುದ ಯುವಕರಿಗೆ ಪ್ರಮಾಣ ಪತ್ರ ಹಾಗೂ ಸವಿ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿ ಎ ಕುಂಬಾರ, ದಯಾನಂದ ತೇಗೂರ, ಸಂತೋಷ ಪಾಟೀಲ, ರಾಜು ನಡಮನಿ, ಮೌಲಾನಾ ಖನದಾಳೆ, ಕಾಶೀನಾಥ ಕಾಳೆ, ದೀಪಕ ಅಗ್ನಿಹೊತ್ರಿ, ಉತ್ತಮಸಿಂಗ ರಜಪೂತ, ಕೆ ಬಿ ಕುರಬೇಟ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!