BELAGAVI

ಚಂದೂರಿನ ಸರ್ಕಾರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Share

ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಚಂದುರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂಕಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಪದ್ಮನ್ನಾ ಕುಂಬಾರ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಕೀರ್ತಿಯನ್ನು ತಂದರು. ಅದೇ ರೀತಿ ಯಡೂರ ಕ್ಲಸ್ಟರ್ನ ಸಿ.ಆರ್‌.ಪಿಗಳಾದ ರಮೇಶ ಮನಗುತ್ತೆ ಹಾಗೂ ಮಂಜುನಾಥ ಕರ್ನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಪಾಟೀಲ, ಉಪಾಧ್ಯಕ್ಷರಾದ ಭಾಗವತ್ ಪಾಟೀಲ್, ಮುಖ್ಯೋಪಾಧ್ಯಾಯರಾದ ಎಂ.ಡಿ. ಅಪರಾಜ್, ಅನಿಲ್ ಕುಮಾರ್ ಶಹಪುರೆ ಹಾಗೂ ಎಲ್ಲಾ ಎಸ್‌ಡಿಎಂಸಿ ಸದಸ್ಯರು ಮತ್ತು ಪಾಲಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಇಕ್ಬಾಲ ಕನವಾದಿ, ಶಂಕರ್ ದಾಬೋಳೆ, ತಮ್ಮನಿ ಕಾಂಬ್ಳೆ, ಪಾಂಡುರಂಗ ಟೊoಬರೆ , ಕೃಷ್ಣಪ್ಪ ಸಕ್ರಪ್ಪ ಗೋಳ, ಪ್ರಿಯಾಂಕ ಪೂಣಜಕರ್, ರೇಣುಕಾ ತಳವಾರ್, ಮೇಘಾ ಚೌಗುಲೆ, ಸೋನಾಲಿ ಡೋನಿ, ಲಕ್ಷ್ಮಿ ಹಿರೇಕೋಡಿ ಹಾಗೂ ಸಂಗೀತ ಬೀಳೂರೆಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಸಿಗೆ ನೀರು ಹಾಯಿಸುವ ಮೂಲಕ ಬಾಲ ವಿಜ್ಞಾನಿಗಳಿಂದ ತಯಾರಿಸಲಾದ ವಿಜ್ಞಾನ ಪ್ರಾಜೆಕ್ಟ್‌ಗಳನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಉಪಕರಣಗಳನ್ನು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು 6ನೇ ತರಗತಿಯ ವಿದ್ಯಾರ್ಥಿನಿ ಪ್ರಜ್ಞ ಮಹಿಪತಿ ಅವರು ಅಚ್ಚುಕಟ್ಟಾಗಿ ನಿರೂಪಣೆ ನಡೆಸಿದರು. ಇನ್ನೊಬ್ಬ ವಿದ್ಯಾರ್ಥಿನಿ ಶ್ರಾವಣಿ ಭಂಡಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕೃಷ್ಣಬಾಯಿ ಕುಂಬಾರ ಅವರು ವಿಜ್ಞಾನ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಶ್ರೇಯಾ ವಾಲ್ಕೆ ಅವರು ಕಾರ್ಯಕ್ರಮವನ್ನು ಸಮನ್ವಯಗೊಳಿಸಿದರು. ಆರನೇ ತರಗತಿಯ ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶಂಕರ್ ದಾಬೋಳೆ ಅವರು ಸರ್ ಸಿ.ವಿ. ರಾಮನ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾದ ಪದ್ಮನ್ನಾ ಕುಂಬಾರ ಅವರು ಹಲವು ವಿಜ್ಞಾನಿಗಳ ಕುರಿತು ಮಾಹಿತಿ ನೀಡಿ, ಮಕ್ಕಳಲ್ಲಿ ವಿಜ್ಞಾನಿಯಾಗಲು ಅಗತ್ಯವಾದ ಅರ್ಹತೆಗಳು, ಸಂಸ್ಕಾರಗಳು ಹಾಗೂ ಪರಿಶ್ರಮದ ಮಹತ್ವವನ್ನು ವಿವರಿಸಿದರು. ಅವರು ನಮ್ಮ ಶಾಲೆಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿದರು.

ಅದೇ ರೀತಿ ಅನಿಲ್ ಕುಮಾರ ಶಹಪುರೆ ಅವರು ಶಾಲೆಯ ದಾಖಲಾತಿ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳಿಗೂ ಹಾಗೂ ದಾನಿಗಳಿಗೂ ಸತ್ಕಾರ ಮಾಡಲಾಯಿತು.
ಈ ರೀತಿಯಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Tags:

error: Content is protected !!