ಕಳೆದ ಬಾರಿ ಪಿ.ರಾಜೀವ ಬೇರೆ ಕ್ಷೇತ್ರಕ್ಕೆ ಹೋಗ್ತಾರೆ ಅಂತ ಕಾರ್ಯಕರ್ತರಲ್ಲಿ ಉದ್ದೇಶಪೂರ್ವಕವಾಗಿ ಗೊಂದಲವನ್ನು ಹುಟ್ಟಿಸುವಂತೆ ಪ್ರಯತ್ನ ಮಾಡಿದ್ರು ಈ ಬಾರಿಯು ಪಿ.ರಾಜೀವ ಈ ಕ್ಷೇತ್ರದಲ್ಲಿ ನಿಲಲ್ಲ,ಬೇರೆ ಕ್ಷೇತ್ರಕ್ಕೆ ಹೋಗ್ತಾರೆ ಅಂತ ಬಹುತೇಕ ಕಾಂಗ್ರೇಸ್ ಪಕ್ಷದವರೇ ಈ ಗೊಂದಲವನ್ನು ಹುಟ್ಟಿ ಹಾಕ್ತಾ ಇದ್ದಾರೆ. ಕಾರ್ಯಕರ್ತರು ಇಂತಹ ಯಾವುದೇ ಗೊಂದಲಕ್ಕೆ ಕಿವಿಗೊಡಬಾರದು ನಾನು ಕರ್ಮಭೂಮಿಯಾಗಿ ಕುಡಚಿ ಮತಕ್ಷೇತ್ರದಿಂದ ಪ್ರಾರಂಭ ಮಾಡಿದ್ದು.ಕುಡಚಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಕುಡಚಿ ಮಾಜಿ ಶಾಸಕ ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಸ್ಪಷ್ಟಪಡಿಸಿದರು.


ಅವರು ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಗುಂಡವಾಡ ಗ್ರಾಮದಲ್ಲಿ ದಲಿತ ಸಮುದಾಯದ ಯುವಕರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು ಎಸ್.ಸಿ. ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಎಸ.ಸಿ.ಪಿ., ಟಿ.ಎಸ.ಪಿ ಯೋಜನೆ ಎಲ್ಲರಿಗಿಂತ ವಿಶೇಷವಾಗಿ ಸೌಲಭ್ಯಗಳನ್ನು ನೀಡುವುದಕ್ಕಾಗಿದೆ ಆದರೆ ಕಾಂಗ್ರೇಸ್ ಸರಕಾರ ಈ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ಮೂಲಕ ಸಮುದಾಯಕ್ಕೆ ಮೋಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಜೀವನ ಸಾಗಿಸುವುದು ದುಸ್ತರವಾಗಿದೆ.ಗ್ರಾಮ ಪಂಚಾಯತಿಗಳಲ್ಲಿ ಯಾವುದೆ ಅಭಿವೃದ್ಧಿಗಳಿಲ್ಲ ಬರುವ ಗ್ರಾಮ, ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗಳಲ್ಲಿ ಜನ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸುತ್ತಾರೆ. ಸರ್ಕಾರ ಕೂಡಲೆ ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ್ ಪುರಸಭೆ ಚುನಾವಣೆ ಘೋಷಣೆ ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ ಎಂದರು.
ಈ ಸಮಯದಲ್ಲಿ ಸುಮಾರು 60ಕ್ಕೂ ಹೆಚ್ಚು ಹಿರಿಯರು, ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀಧರ ಮೂಡಲಗಿ, ಮಲಗೌಡ ಪಾಟೀಲ, ಧರೆಪ್ಪಾ ಕಾಂಬಳೆ, ಶ್ರೀಮಂತ ಗಸ್ತಿ, ಸುಭಾಷ ಕಾಂಬಳೆ, ನೇಮಿನಾಥ ಪಾಟೀಲ, ರಾಜೇಂದ್ರ ಗಸ್ತಿ, ಶಿವರಾಜ ಕಾಂಬಳೆ,ವರದರಾಜ ಕಾಂಬಳೆ, ಸಂಗಪ್ಪ ಗಸ್ತಿ, ಪ್ರೇಮ ಗಸ್ತಿ, ಮೋಹನ ಲೋಹಾರ ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.
