Dharwad

ಧಾರವಾಡದ ವಿದ್ಯಾಗಿರಿ ಪೊಲೀರಿಂದ ಮಾದರಿಯ ಕಾರ್ಯ…

Share

ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರವಾಡ ನಗರದ ವಿವಿಧ ಕಡೆಗಳಿಗೆ ತೆರಳಿದ ಧಾರವಾಡ ವಿದ್ಯಾಗಿರಿ ಪೊಲೀಸರು ಒಬ್ಬಂಟಿಯಾಗಿ ವಾಸಿಸುವ ವಯೋ ವೃದ್ಧರಿಗೆ ನಿಮ್ಮೊಂದಿಗೆ ನಾವು ಎಂಬ ಕಾರ್ಯಕ್ರಮದಡಿಯಲ್ಲಿ, ಒಂಬಟಿಯಾಗಿ ವಾಸಿಸುವ ಹಿರಿಯ ಜೀವಕ್ಕೆ ಧಾರವಾಡ ವಿದ್ಯಾಗಿರಿ ಪೊಲೀಸರು ಸಹಾಯಹಸ್ತ ಚಾಚಿ ಮಾದರಿಯಾಗಿದ್ದಾರೆ.‌

ಧಾರವಾಡದ ಶಿವಾನಂದ ನಗರ ಹಾಗೂ ಚಪ್ಪರಬಂದ್ ಕಾಲೋನಿಯ ವೃದ್ಧ ಮಹಿಳೆಯರಿಗೆ ಸಹಾಯ ಮಾಡಿದ್ದಾರೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಈ ಹಿಂದೆ ವಿದ್ಯಾಗಿರಿ ಪೊಲೀಸರು ಅಜ್ಜಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಓಡಾಡಲು ವಾಕರ್ ಕೊಡಿಸುವಂತೆ ಹೇಳಿಕೊಂಡಿದ್ದರು. 80 ವರ್ಷದ ಬಿಬಿಜಾನ ಅವರಿಗೆ ಓಡಾಡಲು ತೊಂದರೆ ಇರುವುದನ್ನು ಗಮನಿಸಿ ವಿದ್ಯಾಗಿರಿ ಠಾಣೆಯ ಪೊಲೀಸರು ವಾಕರ ವಿತ್ತರಣೆ ಮಾಡುವ ಮೂಲಕ ಕರ್ತವ್ಯ ಮದ ಮಧ್ಯ ಮಾನವೀಯತೆ ಕಾರ್ಯ ಮಾಡಿದ್ದಾರೆ. ಅದರಂತೆಯೇ ಗಂಗಮ್ಮ ಅಜ್ಜಿಯ ಕಣ್ಣು ಕಾಣಿಸುವುದಿಲ್ಲ, ಈ ಹಿನ್ನೆಲೆಯಲ್ಲಿ ಅವರನ್ನು ಅನಾಥಾಶ್ರಮಕ್ಕೆ ಸೇರಿಸುವ ಕಾರ್ಯ ಮುಂದುವರಿದಿದೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!