ಬೆಳಗಾವಿಯ ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಮಾಣಿಕ್ ಬಾಗ್ ಗ್ರೂಪ್‌ನ ನೂತನ ಘಟಕ ‘ಮಿಷಾ ಚೇತಕ್’ ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ.


ಬೆಳಗಾವಿಯ ಬುಧವಾರ ‘ಮಿಷಾ ಚೇತಕ್’ ನೂತನ ಮಳಿಗೆಯ ಲೋಕಾರ್ಪಣಾ ಸಮಾರಂಭವು ಅತ್ಯಂತ ಸಂಭ್ರಮದಿಂದ ಜರುಗಿತು. ಮಾಣಿಕ್ ಬಾಗ್ ಗ್ರೂಪ್‌ನ ಮತ್ತೊಂದು ವಿನೂತನ ಘಟಕವಾಗಿ ಆರಂಭವಾಗಿರುವ ಈ ಮಳಿಗೆಯನ್ನು ಬೆಳಗಾವಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಬರಮನಿ ಹಾಗೂ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ವಿನೋದ ದೊಡ್ಡನವರ ಅವರು ಉದ್ಘಾಟಿಸಿದರು. ಈ ವಿಶೇಷ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಗಣ್ಯರು, ನೂತನ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಬೆಳಗಾವಿಯ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿ ಎಂದು ಶುಭ ಹಾರೈಸಿದರು..

ಡಿಸಿಪಿ ನಾರಾಯಣ್ ಬರಮನಿ ಅವರು ವಿದೇಶದಲ್ಲಿ ಶಿಕ್ಷಣ ಪಡೆದರೂ ತಾಯ್ನಾಡಿಗೆ ಬಂದು ಸೇವೆ ಸಲ್ಲಿಸುತ್ತಿರುವ ದೀಪ ಮಿರ್ಜಿ ಅವರ ಸೇವೆಯನ್ನು ಪ್ರಶಂಸಿಸಿದರು. ಚೇತಕ್ ಬ್ರ್ಯಾಂಡ್ ಅತ್ಯಂತ ಹಳೆಯ ಮತ್ತು ಗ್ರಾಹಕರ ವಿಶ್ವಾಸಾರ್ಹ ದ್ವಿ ಚಕ್ರವಾಹನವಾಗಿದೆ. ಈಗ ಆಧುನಿಕತೆಯೊಂದಿಗೆ ಮತ್ತೇ ದೇಶದ ಜನರ ಬಳಕೆಗಾಗಿ ರಸ್ತೆಗಿಳಿದಿದ್ದು, ಇದನ್ನ ಬೆಳಗಾವಿಗೆ ದೊರಕಿಸಿಕೊಡುತ್ತಿರುವ ದೀಪ ಅವರ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು.

ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ವಿನೋದ ದೊಡ್ಡನವರ ಅವರು ಬಝಾಜ್ ಎಂದ ಕೂಡಲೇ ಹಮ್ಹಾರಾ ಕಲ್ ಹಮ್ಹಾರಾ ಆಜ್ ಬುಲಂದ್ ಭಾರತ್ ಕೀ ಬುಲಂದ್ ತಸ್ವೀರ್ ಎಂಬ ವಾಕ್ಯ ನೆನಪಾಗುತ್ತದೆ. ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನವನ್ನು ಬೆಳಗಾವಿಗರಿಗೆ ಪರಿಚಯಿಸಿದ್ದು, ಈ ಉದ್ಯೋಗದಲ್ಲಿ ದೀಪ ಮಿರ್ಜಿ ಅವರು ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಮಾಣಿಕಬಾಗ್ ಕುಟುಂಬ ನೂರಾರು ವರ್ಷಗಳಿಂದ ವಾಹನ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಟಾಟಾ ಮೋಟರ್ಸ್, ಕಮರ್ಷಿಯಲ್, ಪ್ಯಾಸೆಂಜರ್, ದ್ವಿಚಕ್ರ ವಾಹನಗಳನ್ನು ಗ್ರಾಹಕರಿಗೆ ನೀಡಿದೆ. ಈಗ 5ನೇ ಪೀಳಿಗೆಯು ಬೆಳಗಾವಿಗರಿಗೆ ಚೇತಕ್ ವಾಹನವನ್ನು ಬೆಳಗಾವಿಗೆ ಪರಿಚಯಿಸಲು ಹರ್ಷ ವ್ಯಕ್ತಪಡಿಸುತ್ತಿದೆ. ಬಝಾಜ್ ಚೇತಕ್ ಭಾರತದ ಜನರಲ್ಲಿ ಒಂದು ಹೊಸ ಚೈತನ್ಯದೊಂದಿಗೆ ಸವಿ ನೆನಪುಗಳನ್ನು ಮರುಕಳಿಸಿ ಹೃದಯದಲ್ಲಿ ಮನೆ ಮಾಡಿರುವ ದ್ವಿಚಕ್ರ ವಾಹನವಾಗಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ನಮಗೆ ಸಂತಸವೆನಿಸುತ್ತಿದೆ ಎಂದು ಸಂಚಾಲಕರಾದ ದೀಪ್ ಮಿರ್ಜಿ ಅವರು ತಿಳಿಸಿದರು.
ಮಾಣಿಕ್ ಬಾಗ್ ಮಿಶಾ ಚೇತಕ್ ಎಂಬ ತನ್ನ ಹೊಸ ಶೋರೂಂನ್ನು ಉದ್ಘಾಟಿಸಿದ್ದು, 6 ತಿಂಗಳ ಹಿಂದೆ ಬಝಾಜ್’ನ ಪೆಟ್ರೋಲ್ ದ್ವಿಚಕ್ರ ವಾಹನವನ್ನು ಪರಿಚಯಿಸಲಾಗಿತ್ತು. ಬೆಳಗಾವಿ ಸೇರಿದಂತೆ ಚಿಕ್ಕೋಡಿ, ರಾಯಬಾಗ, ಗೋಕಾಕ್, ಹಾರೂಗೇರಿ, ಅಥಣಿ ಇನ್ನುಳಿದೆಡೆ ತನ್ನ ಶೋರೂಂಗಳನ್ನು ನಿರ್ಮಿಸಿ ಉತ್ತಮ ಸೇವೆ ಸಲ್ಲಿಸಿದ್ದು, ಈಗ ಬಝಾಜ್ ಚೇತಕ್ ಶೋರೂಂ ಆರಂಭಿಸುವ ಸುಸಂದರ್ಭ ಒಲಿದು ಬಂದಿದೆ ಎಂದು ಮಾರ್ಕೇಟಿಂಗ್ ಆಂಡ್ ಡೆವಲ್ಹಪಮೆಂಟ್ ಮ್ಯಾನೇಜರ್ ಶೈಲೇಶ್ ಖಟಾವಕರ ಹೇಳಿದರು.
ಸ್ಥಳೀಯ ಕೈಗಾರಿಕೋದ್ಯಮಿಗಳು ಮತ್ತು ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ನೂತನ ಆರಂಭವನ್ನು ಕಣ್ತುಂಬಿಕೊಂಡರು
