ಬೆಳಗಾವಿ ನಗರದಲ್ಲಿ 2,992 ಮ್ಯೂಲ್ ಅಕೌಂಟ್ ಅಪರೇಟ್ ಆಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 772 ಅಕೌಂಟ್ ಮೋಸ ಮಾಡಿದ ಅಕೌಂಟ್ ಪ್ರಕರಣದ ಕೆವೈಸಿ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ನಿಮ್ಮ ಸ್ನೇಹಿತರು, ಪರಿಚಯದವರು, ಮನೆಯ ಕೆಲಸ ಎಂದು ಹೇಳಿ ಟೈಮ್ ಪಾಸ್ ಜನರ ಅಕೌಂಟ್ ಕೇಳಿ ಸೈಬರ್ ಕ್ರೈಮ್ ನಲ್ಲಿ ಸೇರಿಸಿಕೊಳ್ಳುವ ಹುನ್ನಾರ ನಡೆಸುವ ಸಂಚು ರೂಪಿಸುತ್ತಿದ್ದಾರೆ. ಇದರಿಂದ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೇ ಕೇಸ್ ದಾಖಲಿಸಲಾಗುವುದು ಎಂದರು.
ಬೇಕಾಬಿಟ್ಟಿಯಾಗಿ ಮೊಬೈಲ್ ಗೆ ಲಿಂಕ್ ಬಂದ್ರೆ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಸ್ನೇಹಿತರು ಶುಭಾಶಯ ಮೆಸೇಜ್ ಕಳುಹಿಸುವಾಗ ಜಾಗರೂಕತೆಯಿಂದ ಇರಬೇಕು ಎಂದರು.
