ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಮಹಿಳೆಯರಿಂದ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರೀವೀರಭದ್ರೇಶ್ವರ ದೇವಸ್ಥಾನದ ನೂತನ ಗೋಪುರಗಳಿಗೆ ಮಹಾಕುಂಭಾಭಿಷೇಕ ವಿಜೃಂಭಣೆಯಿಂದ ಜರುಗುತ್ತಿದೆ.


ದಕ್ಷಿಣದ ಕಾಶೀ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಕುಂಭಾಭಿಷೇಕ ಕಳೆಗಟ್ಟಿದೆ.ನೂತನವಾಗಿ ನಿರ್ಮಾಣಗೊಂಡ ಗೋಪುರಗಳಿಗೆ ಶ್ರೀಶೈಲ್ ಜಗದ್ಗುರು ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಕಳಸಗಳನ್ನು ಪ್ರತಿಷ್ಠಾನವನ್ನು ಮಾಡಲಾಯಿತು. ಬಳಿಕ ಮಹಿಳೆಯರು ಕೃಷ್ಣಾನದಿಯಿಂದ ತಂದತಹ ಕುಂಭಗಳನ್ನು ಕಳಸ ಹಾಗೂ ಗೋಪುರಗಳ ಮೇಲೆ ಅಭಿಷೇಕವನ್ನು ಮಾಡಲಾಗುತ್ತಿದೆ.ಈ ಮಹಾಕುಂಭಾಭಿಷೇಕದಲ್ಲಿ ಮಹಿಳೆಯರು,ಪುರುಷರು,ಯುವಕರು ವೃಧ್ದರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದಾರೆ.ಮಹಾಕುಂಭಾಭಿಷೇಕದಲ್ಲಿ ಕಾಶೀ ಜಗದ್ಗುರುಗಳು,ಉಜ್ಜನೀಯ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಿದ್ದರು.

