Vijaypura

ಎಲ್‌ಪಿಜಿ ಸಿಲಿಂಡ‌ರ್ ಕೊರತೆ: ಕಾಳ ಸಂತೆಯಲ್ಲಿ ₹3,000ಕ್ಕೆ ಸೇಲ್!

Share

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ವಿಜಯಪುರ ಜಿಲ್ಲೆಯ ಕಾಳ ಸಂತೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳು 3,000 ರೂಪಾಯಿಗಳಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ. ಹೋಟೆಲ್‌ಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬಳಕೆ ಅನಿವಾರ್ಯವಾಗಿದ್ದು, ಸಣ್ಣ ಹೋಟೆಲ್‌ಗಳು ಮಾತ್ರ ಸೌದೆ ಒಲೆಗಳನ್ನು ಬಳಸುತ್ತಿವೆ.

ಹೇಗಾದರೂ ಮಾಡಿ ಸಿಲಿಂಡರ್ ಪಡೆದು ಒಂದೆರಡು ದಿನ ಹೋಟೆಲ್ ನಡೆಸೋಣಾ ಎಂದು ವಿಚಾರಿಸಿದರೆ 3,000 ರೂಪಾಯಿ ಕೇಳುತ್ತಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸಿಲಿಂಡ‌ರ್ ಅಭಾವದಿಂದಾಗಿ ಹೋಟೆಲ್‌ಗಳು ಮುಚ್ಚಿಹೋಗಿವೆ. ಇದರಿಂದಾಗಿ ಪ್ರವಾಸಿಗರು ಜಿಲ್ಲೆಗೆ ಬರುವುದು ಕಡಿಮೆಯಾಗಿದ್ದು, ಗೋಲಗುಮ್ಮಟ ಪ್ರವಾಸಿ ತಾಣವೂ ಬಿಕೋ ಎನ್ನುತ್ತಿದೆ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದ ಗೋಲಗುಮ್ಮಟಕ್ಕೆ, ಹೋಟೆಲ್ ಉದ್ಯಮ ಸ್ಥಗಿತಗೊಂಡ ಪರಿಣಾಮ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಗ್ಗಿದೆ.

Tags:

error: Content is protected !!