Kagawad

ಕಾಗವಾಡದಲ್ಲಿ ಭಗವಾನ್ ಮಹಾವೀರ ಜಯಂತಿ ಸಂಭ್ರಮ: ಶೋಭಾಯಾತ್ರೆ, ಪಂಚಾಮೃತ ಅಭಿಷೇಕದೊಂದಿಗೆ ಮಿಂದೆದ್ದ ಭಕ್ತ ಸಮೂಹ!

Share

ಕ್ರಿ.ಪೂ. ೫೯೯ರಲ್ಲಿ ಬಿಹಾರದ ಕುಂಡಗ್ರಾಮದಲ್ಲಿ ಜನಿಸಿದ ಮಹಾವೀರರು ಮಾನವಕುಲಕ್ಕೆ ಅಹಿಂಸೆ, ಸತ್ಯ ಮತ್ತು ತ್ಯಾಗದ ಶಾಶ್ವತ ಸಂದೇಶವನ್ನು ನೀಡಿದ ಮಹಾನ್ ತತ್ವಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೨೬ನೇ ವರ್ಷವು ಭಗವಾನ್ ಮಹಾವೀರರ ೨೬೨೫ನೇ ಜನ್ಮ ಕಲ್ಯಾಣಕೋತ್ಸವವಾಗಿ ಆಚರಿಸಲಾಗುತ್ತಿದೆ.

ರಾಜಕುಟುಂಬದಲ್ಲಿ ಜನಿಸಿದರೂ ಭೌತಿಕ ವೈಭವವನ್ನು ತ್ಯಜಿಸಿ ೩೦ನೇ ವಯಸ್ಸಿನಲ್ಲಿ ತಪಸ್ಸಿನ ಮಾರ್ಗವನ್ನು ಆರಿಸಿದ ಅವರು ಹನ್ನೆರಡು ವರ್ಷಗಳ ಕಠಿಣ ಸಾಧನೆಯ ಬಳಿಕ ಕೇವಲ ಜ್ಞಾನವನ್ನು ಹೊಂದಿದರು ಎಂದು ಜೈನ ಆಗಮಗಳು ವಿವರಿಸುತ್ತವೆ. ಜೈನ ಭಟ್ಟಾರಕ ಹಾಗೂ ಮುನಿಮಹಾರಾಜರ ಪ್ರವಚನಗಳ ಪ್ರಕಾರ ಮಹಾವೀರರು ಮಾನವನ ಒಳಗಿನ ಕ್ರೋಧ, ಲೋಭ ಮತ್ತು ಅಹಂಕಾರವನ್ನು ಜಯಿಸುವುದೇ ನಿಜವಾದ ವಿಜಯ ಎಂದು ಬೋಧಿಸಿದ್ದು, ಅಹಿಂಸೆ, ಸತ್ಯ ಸಮಾಜಕ್ಕೆ ಬೋಧನೆ ಮಾಡಿದ್ದಾರೆ. ಎಂದು ಆಚಾರ್ಯ ಶೀತಲಸಾಗರಜಿ ಮುನಿಮಹಾರಾಜ ಕಾಗವಾಡದಲ್ಲಿ ಪ್ರವಚನ ಮುಖಾಂತರ ಶ್ರಾವಕರಿಗೆ ಬೋಧನೆ ಮಾಡಿದರು.

ಕಾಗವಾಡದ ಜೈನ್ ಸಮಾಜ ಸಂಘಟನೆ ವತಿಯಿಂದ ಸ್ಥಳೀಯ ಭಗವಾನ್ ಮಹಾವೀರ ಜೈನ ಮಂದಿರದಲ್ಲಿ ಮಹಾವೀರ ಜಯಂತಿ ಭಕ್ತಿಯಿಂದ ಆಚರಿಸಲಾಯಿತು ಇದರ ಸಾನಿಧ್ಯ ವಹಿಸಿದ ಆಚಾರ್ಯ ಶೀತಲಸಾಗರಜಿ ಮಹಾರಾಜ ಆಶೀರ್ವಚನ ನೀಡಿದರು.

ಬೆಳಗ್ಗೆ ಭಗವಾನ್ ಮಹಾವೀರ್ ಜೈನಮಂದಿರ ದಿಂದ ಎರಡು ಆಶ್ವಗಳು, ರಥ, ಸವಾದ್ಯದೊಂದಿಗೆ ಭಗವಾನ್ ಮಹಾವೀರರ ಮೂರ್ತಿ ತೆಗೆದುಕೊಂಡು ಶ್ರಾವಕ-ಶ್ರಾವಿಕೆಯರು ಸರ್ಕಾರಿ ಕನ್ನಡ ಶಾಲಾ ಆವರಣದ ಸಭಾ ಮಂಟಪದಲ್ಲಿ ಭಗವಾನ್ ಮಹಾವೀರರ ಮೂರ್ತಿಗೆ ಪೂಜಾ ವಿಧಿ-ವಿಧಾನ ದೊಂದಿಗೆ ಪಂಚಾಮೃತ ಅಭಿಷೇಕ ಮಾಡಿಸಿಕೊಂಡು ಭಗವಾನ್ ಮಹಾವೀರರ ಜೈಕಾರ ಹಾಕುತ ಮಂದಿರವರಿಗೆ ಬಂದು ಶೋಭಾ ಯಾತ್ರೆ ಕೊನೆಗೊಳಿಸಿದರು.
ಆಚಾರ್ಯ ಶೀತಲಸಾಗರಜಿ ಮಹಾರಾಜ ಇವರ ಸಾನಿಧ್ಯದಲ್ಲಿ ಪೂಜಾ ವಿಧಿ-ವಿಧಾನ ಹಾಗೂ ಜನ್ಮದಿನದ ತೊಟ್ಟಲ ತೂಗುವ ಕಾರ್ಯಕ್ರಮ ನೆರವೇರಿತು.
ಕಾಗವಾಡ ತಾಲೂಕ ಜೈನ್ ಸಮಾಜ ಸಂಘಟನೆಯ ಅಧ್ಯಕ್ಷ ನ್ಯಾಯವಾದಿ ತಾತ್ಯಾಸಾಹೇಬ್ ಧೋತರೆ ಇವರ ನೇತೃತ್ವದಲ್ಲಿ ಸಮಾಜದ ಎಲ್ಲ ಹಿರಿಯ ಶ್ರಾವಕ, ಶ್ರಾವಿಕೆಯರು, ಯುವಕರು ಒಂದುಗೂಡಿ ಭಗವಾನ್ ಮಹಾವೀರರ ಜಯಂತಿ ಆಚರಿಸಿದರು.
ಮಹಾವೀರ ಜಯಂತಿ ನಿಮಿತ್ಯ ದೇಣಿಗೆ:

ಸಮಾರಂಭದಲ್ಲಿ ಮಂದಿರ ನಿರ್ಮಿಸಲು ಗ್ರಾಮದ ಹಿರಿಯ ದಾನಿಗಳು ಪ್ರತಿಯೊಬ್ಬರು ೧ ಲಕ್ಷ ೧೦೦೮ ರೂಪಾಯಿ ದಾನವಾಗಿ ನೀಡಿರುವ ದಾನಿಗಳಾದ ಕಲ್ಲಪ್ಪಾ ಮಗದುಮ, ರಾವಸಾಹೇಬ ಚೌಗುಲೆ, ಪಾರಿಸ್ ಬೋರಗಾಂವೆ, ಗೋವಾ, ರಾಯಣ್ಣಾ ಕಿನ್ನಿಂಗೆ, ಸನ್ಮತಿ ಚೌಗುಲೆ ಇವರನ್ನು ಮುನಿಮಹಾರಾಜರ ಸಾನಿಧ್ಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಭಗವಾನ್ ಮಹಾವೀರ ಇವರ ಜಯಂತಿ ಕಾಗವಾಡ ತಾಲೂಕ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಒಂದುಗೂಡಿ ತಹಶೀಲ್ದಾರ್ ಕಚೇರಿ, ಹಾಗೂ ತಾಲೂಕ ಪಂಚಾಯಿತಿ ಕಚೇರಿಯಲ್ಲಿ ಆಚರಿಸಿದರು.

ಭಗವಾನ್ ಮಹಾವೀರರ ಪ್ರತಿಮೆಗೆ ತಹಶೀಲ್ದಾರ್ ರವೀಂದ್ರ ಹಾದಿಮನಿ, ಉಪತಹಶಿಲ್ದಾರ್ ವಿಜಯ್ ಚೌಗೂಲೆ, ಜೈನ ಸಮಾಜ ಸಂಘಟನೆ ಅಧ್ಯಕ್ಷ ನ್ಯಾಯವಾದಿ ತಾತ್ಯಾಸಾಹೇಬ್ ಧೋತರೆ, ತಿರುಪತಿ ರಾಥೋಡ್, ದಿಲೀಪ್ ಕವಟಗೆ, ಬಾಳು ಕವಟಗೆ, ರಾಜೀವ್ ಮಗದುಮ್, ರಾವ್‌ಸಾಬ್ ಖಡಕೆ, ಅರ್ಚಕ ಉದಯ್ ಉಪಾಧ್ಯೆ, ಸುರೇಖಾ ಬಸ್‌ನಾಯ್ಕ್, ತಾಲೂಕ ಪಂಚಾಯಿತಿ ಅಧಿಕಾರಿ ಎ.ಡಿ ಅನಸಾರಿ, ಅನಿಲ್ ಸಿಜೋಳೆ, ವಿನೋಧ ಪತಕಿ ಸೇರದಂತೆ ಅನೇಕರು ಇದ್ದರು.
ಬೆಳಗ್ಗೆಯಿಂದ ಸಂಜೆವರೆಗೆ ಭಗವಾನ್ ಮಹಾವೀರ ಜಯಂತಿ ಆಚರಿಸಲು ಜೈನ ಸಮಾಜದ ಮುಖಂಡರಾದ ರಾಜು ಖೋತ್, ಶೀತಲ್ ಗೋಬಾಜೆ, ಅಜಿತ್ ಕರವ, ಆದಿನಾಥ್ ಬಿಂದಗೆ, ಶುಭಮ ಕರವ, ರಾಜು ಮಗದುಮ್, ಬಾಳು ಕವಟಗೆ, ಶಾಂತಿನಾಥ್, ವೀರ ಮಹಿಳಾ ಮಂಡಳದ ಎಲ್ಲ ಸದಸ್ಯರು ವಿಶೇಷವಾಗಿ ಸಹಕರಿಸಿದರು.

ಇದೇ ರೀತಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲ್ ಪಾಟೀಲ್ ಹಾಗೂ ಸ್ಥಳೀಯ ಜೈನ ಸಮಾಜದ ಮುಖಂಡರು, ಮಹಿಳಾ ಸದಸ್ಯರು ಒಂದುಗೂಡಿ ಭಕ್ತಿಯಿಂದ ಭಗವಾನ್ ಮಹಾವೀರ್ ಜಯಂತಿ ಆಚರಿಸಿದರು. ಇದೇ ರೀತಿ ಐನಾಪುರ್, ಉಗಾರ್ ಖುರ್ದ್, ಶಿರಗುಪ್ಪಿ, ಮೋಳೆ, ಜುಗುಳ, ಶೇಡಬಾಳ, ಮಂಗಸುಳಿ ಮುಂತಾದ ಗ್ರಾಮಗಳಲ್ಲಿ ಜೈನ ಸಮಾಜ ಬಾಂಧವರು ಭಕ್ತಿಯಿಂದ ಮಹಾವೀರ ಜಯಂತಿ ಆಚರಿಸಿದರು.

Tags:

error: Content is protected !!