ನಿರಂತರವಾಗಿ ಶ್ರಮಪಟ್ಟಾಗ ಮಾತ್ರ ಮನುಷ್ಯ ಯಶಸ್ಸು ಕಾಣಲು ಸಾಧ್ಯಾಗುತ್ತದರ ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹೇಳಿದರು.

ಶನಿವಾರ ಬೆಳಗಾವಿಯ ಶಹಾಪುರ ಗಾಡೆ ಮಾರ್ಗದಲ್ಲಿ ಛಲವಾದಿ ಮಹಾಸಂಘ ಬೆಳಗಾವಿ ವತಿಯಿಂದ ಆಯೋಜಿಸಲಾದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಾಕ್ಯ ನಮ್ಮ ಬದುಕಿನ ಮೂಲ ಮಂತ್ರವಾಗಬೇಕು. ಸಮಾಜದಲ್ಲಿ ಶೋಷಿತರಿಂದ ಬೆಳದು ಸಾಧನೆ ಮಾಡಿದ್ದ ಅಂಬೇಡ್ಕರ್ ಅವರು ವಿಶ್ವಕ್ಕೆ ಪರಿಚಿತರಾಗಿದ್ದಾರೆ. ತಳ ಸಮುದಾಯದವರಿಗೂ ನ್ಯಾಯ ದೊರಕಿಸಿಕೊಡುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ತಳ ಸಮುದಾಯದವರು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬರಲು ಸಹಕಾರ ಮಾಡಬೇಕಿದೆ. ನಮ್ಮ ನೋವು ನಮ್ಮಗೆ ಗೊತ್ತಿರುತ್ತದೆ. ನಾವೇ ಆ ಜವಾಬ್ದಾರಿ ತೆಗೆದುಕೊಂಡು ಎಲ್ಲರೂ ಛಲವಾದಿ ಯುವ ಸಂಘ ಆ ಕಾರ್ಯವನ್ನು ಮಾಡುತ್ತಿರವುದು ಅಭಿಮಾನದ ಸಂಗತಿ ಎಂದು.
ಆರ್. ಎಸ್. ಕೋಠಾರೆ ಮಾತನಾಡಿ, ಛಲವಾದಿ ಯುವ ಸಂಘ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡುತ್ತಿದೆ. ಈ ವರ್ಷವೂ ಸಹ 50 ರಿಂದ 60 ಜನ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಮಾರ ಕೋಲ್ಕಾರ್, ಪ್ರತಾಪ್ ಚಾವಡಿಕರ ಸೇರಿದಂತೆ 60 ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದರು.
ಸಂತೋಷ್ ಸತ್ಯನಾಯಕ, ಯಲ್ಲಪ್ಪ ಕೋಲ್ಕಾರ್, ವಿನೋದ್ ಕಾಂಬಳೆ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
