ಬೀಗರ ಮನೆಗೆ ರಂಜಾನ್ ಅಡುಗೆ ನೀಡಿ ಬೈಕ್ ಮೇಲೆ ಮನೆಗೆ ಮರಳುವ ವೇಳೆ ಅಪರಿಚಿತ ವಾಹನ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಯುವಕರ ಒ್ರಾಣ ತೆಗೆದಿದ್ದ ತಮಿಳುನಾಡ ನೋಂದಣಿಯ ಲಾರಿಯನ್ನು ಹಿಡಿದು ತರುವಲ್ಲಿ ಧಾರಚಾಡ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾರಿ ಹಿಟ್ ಆ್ಯಂಡ್ ರನ್‌ಗೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಮೂಲದ ಇಮಾಮ್‌ಸಾಬ್ ಹೆಬ್ಬಳ್ಳಿ (21) ಸ್ಥಳದಲ್ಲಿಯೇ ಸಾವನಪಿದ್ದು, ಮಹ್ಮದ್‌ಯೂನಸ್ ಮುಲ್ಲಾನವರ್(17) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬೈಕ್‌ಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದ ಲಾರಿಯನ್ನು ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಕೊನೆಗೂ ಹಿಡಿದು ತಂದಿದ್ದಾರೆ. ರಂಜಾನ್ ಹಬ್ಬದಂದು ಘಟನೆ ನಡೆದಿದ್ದು, ಲಕಮಾಪುರ ಗ್ರಾಮದಲ್ಲಿನ ಯುವಕರ ಕುಟುಂಬಕ್ಕೆ ಕಣ್ಣೀರು ಹಾಕುವಂತೆ ಮಾಡಿತ್ತು. ಇಬ್ಬರು ಯುವಕರು ಬೈಕ್ ಮೇಲೆ ಧಾರವಾಡದ ಕಂಬಾರಗಣವಿ ಗ್ರಾಮಕ್ಕೆ ಮರಳುವ ವೇಳೆ ಈ ದುರ್ಘಟನೆ ನಡೆದಿತ್ತು. ಲಾರಿ ಡಿಕ್ಕಿ ರಭಸಕ್ಕೆ ಇಬ್ಬರು ಯುವಕರು ರಕ್ತದ ಮಡುವಿನಲ್ಲಿ ಬಿದಿದ್ದರು. ರಸ್ತೆ ಹೋಗುವವರು ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನು ಅಂಬ್ಯುಲೆನ್ಸ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದರು. ಓರ್ವ ಯುವಕ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದನ್ನು, ಇನ್ನೋರ್ವ ಯುವಕ ಆಸ್ಪತ್ರೆಯಲ್ಲಿ ಸಾವನಪಿದ್ದನ್ನು. ಪ್ರಕರಣ ದಾಖಲಿಸಿಕೊಂಡಿದ್ದ ಧಾರವಾಡ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ನೇತೃತ್ವದ ತಂಡ ಹಿಟ್ ಆ್ಯಂಡ್ ರನ್ ಮಾಡಿದ ಲಾರಿ ಸೇರಿ ಚಾಲಕನನ್ನು ಹಿಡಿ ತಂದು ಕಂಬಿ ಹಿಂದೆ ತಳ್ಳಿದ್ದಾರೆ.
