khanapur

ಆಕಾಶದಲ್ಲಿ ಜೀವ ಉಳಿಸಿದ ‘ಡಾಕ್ಟರ್’ ಶಾಸಕಿ: ಅಂಜಲಿ ನಿಂಬಾಳ್ಕರ್ ಕಾರ್ಯಕ್ಕೆ ಮನಸೋತ ಗಗನಸಖಿಯರು – ವಿಮಾನದಲ್ಲೇ ಅದ್ಧೂರಿ ಸನ್ಮಾನ

Share

• ಆಕಾಶದಲ್ಲಿ ಜೀವ ಉಳಿಸಿದ್ದ ಮಾಜಿ ಶಾಸಕಿ
• ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆಗೆ ಸಲಾಂ
• ಗಗನಸಖಿಯಿಂದ ಹೂವು ನೀಡಿ ವಿಶೇಷ ಸ್ವಾಗತ
• ಇಂಡಿಗೋ ಸಿಬ್ಬಂದಿಯಿಂದ ಭಾವುಕ ಕೃತಜ್ಞತಾ ಅರ್ಪಣೆ

ಆಕಾಶ ಮಾರ್ಗದಲ್ಲಿ ಕಠಿಣ ಸಂದರ್ಭದಲ್ಲಿ ಒಬ್ಬರ ಜೀವ ಉಳಿಸಿದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರ ಮಾನವೀಯ ಕಾರ್ಯಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆಯ ಗಗನಸಖಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.
ಪುದುಚೇರಿಯಿಂದ ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿದ್ದ ಗಗನಸಖಿಯೊಬ್ಬರು ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ, ಪ್ರೀತಿಯಿಂದ ಗುಲಾಬಿ ಹೂವು ಹಾಗೂ ಗ್ರೀಟಿಂಗ್ ಕಾರ್ಡ್ ನೀಡಿ ಹೃದಯಸ್ಪರ್ಶಿ ಸ್ವಾಗತ ಕೋರಿದರು. ಈ ವೇಳೆ ಅತೀವ ಭಾವುಕರಾದ ಅಂಜಲಿ ನಿಂಬಾಳ್ಕರ್ ಅವರು ಕ್ಷಣಕಾಲ ಮೌನಕ್ಕೆ ಶರಣಾದರು. ತದನಂತರ ಗಗನಸಖಿ, “ಆಕಾಶದಲ್ಲಿ ನೀವು ಒಬ್ಬರ ಜೀವ ಉಳಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳು ಮೇಡಂ ಜೀ” ಎಂದು ಕೃತಜ್ಞತೆ ಸಲ್ಲಿಸಿ, ಅವರೊಂದಿಗೆ ಸವಿನೆನಪಿನ ಫೋಟೋ ತೆಗೆಸಿಕೊಂಡರು. ಈ ಘಟನೆಯು ಅಲ್ಲಿದ್ದ ಇತರ ಪ್ರಯಾಣಿಕರ ಗಮನ ಸೆಳೆದಿದ್ದು, ಡಾ. ಅಂಜಲಿ ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಯನ್ನು ಇಂಡಿಗೋ ಸಿಬ್ಬಂದಿ ಮತ್ತೊಮ್ಮೆ ಕೊಂಡಾಡಿದರು.

Tags:

error: Content is protected !!