BELAGAVI

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಚುನಾವಣೆ: ಬೆಳಗಾವಿಯಲ್ಲಿ ಸುಗಮ ಮತದಾನ ಪ್ರಕ್ರಿಯೆ

Share

ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಮಹತ್ವದ ಘಟ್ಟವಾಗಿರುವ ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಚುನಾವಣೆ ಇಂದು ರಾಜ್ಯಾದ್ಯಂತ ನಡೆಯುತ್ತಿದೆ. ಬೆಳಗಾವಿ ನಗರದಲ್ಲಿಯೂ ವಕೀಲರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಚುನಾವಣೆ ಇಂದು ರಾಜ್ಯಾದ್ಯಂತ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದು, ಬೆಳಗಾವಿಯಲ್ಲಿನ 7 ಮತಗಟ್ಟೆಗಳಲ್ಲಿ ವಕೀಲರು ತಮ್ಮ ಹಕ್ಕು ಚಲಾಯಿಸಿದರು. ಬೆಳಗಾವಿ ನಗರವೊಂದರಲ್ಲೇ 2160 ಮತದಾರರಿದ್ದು, ಬೆಳಿಗ್ಗೆ 10:30 ರಿಂದ 12 ಗಂಟೆಯವರೆಗೆ ಸುಮಾರು 225 ಮತಗಳು ಚಲಾವಣೆಯಾಗಿದ್ದವು. ರಿಟರ್ನಿಂಗ್ ಆಫೀಸರ್ ಸುಭಾಸ್ ಆಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪ್ರಕ್ರಿಯೆಗೆ ಪೊಲೀಸ್ ಮತ್ತು ಸಹಾಯಕ ನಿಬಂಧಕರ ಕಚೇರಿಯ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದರು.
ಒಟ್ಟು 25 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ 149 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ 5 ಸ್ಥಾನಗಳನ್ನು ಮಹಿಳಾ ವಕೀಲರಿಗಾಗಿ ಮೀಸಲಿಡಲಾಗಿದೆ ಎಂದು ಬೆಳಗಾವಿ ವಕೀಲರ ಸಂಘದ ಕಾರ್ಯದರ್ಶಿ ವೈ.ಕೆ. ದಿವಟೆ ಮಾಹಿತಿ ನೀಡಿದ್ದಾರೆ. ಬೈಟ್

ಮತದಾನದ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತಿದ್ದು, ವಕೀಲ ಸಮುದಾಯವು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಹೆಚ್ಚಿನ ಉತ್ಸಾಹದಿಂದ ಭಾಗವಹಿಸುತ್ತಿದೆ.

Tags:

error: Content is protected !!