arrest

ಹಿರೇಬಾಗೇವಾಡಿಯಲ್ಲಿ ಕಲ್ಯಾಣ ಮಟಕಾ ದಂಧೆಕೋರನ ಬಂಧನ!

Share

ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಮಟಕಾ ದಂಧೆಯ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕುಕಡೊಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣದ ಆಮಿಷವೊಡ್ಡಿ ಮಟಕಾ ಆಡಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ಆರೋಪಿಯಿಂದ ನಗದು ಹಾಗೂ ಮಟಕಾ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ.

ದಿನಾಂಕ 26/03/2026 ರಂದು ಕುಕಡೊಳ್ಳಿ-ಗೆಜಪತಿ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ‘ಕಲ್ಯಾಣ ಮಟಕಾ’ ಆಟ ಆಡಿಸುತ್ತಿದ್ದ ಪಾರಿಶ್ವಾಡದ ಹೊನ್ನಪ್ಪ ಬಸಪ್ಪ ಕೋಲಕಾರ (45) ಎಂಬಾತನನ್ನು ಹಿರೇಬಾಗೇವಾಡಿ ಠಾಣೆಯ ಪಿಎಸ್‌ಐ ಅವಿನಾಶ ಎ. ವೈ. ನೇತೃತ್ವದ ತಂಡ ಬಂಧಿಸಿದೆ. ಆರೋಪಿತನಿಂದ ದಂಧೆಗೆ ಬಳಸುತ್ತಿದ್ದ ಹಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಲಾಗಿದೆ. ಸಾರ್ವಜನಿಕ ಶಾಂತಿ ಕದಡುವ ಇಂತಹ ಅಕ್ರಮ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪೊಲೀಸ್ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!