Bagalkot

ಬಾಗಲಕೋಟೆ ಬೈ-ಎಲೆಕ್ಷನ್ ಅಖಾಡಕ್ಕೆ ‘ಕೈ’ ನಾಯಕರು: ಉಸ್ತುವಾರಿ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ಭರ್ಜರಿ ಮನೆ ಮನೆ ಪ್ರಚಾರ!

Share

ಬಾಗಲಕೋಟೆ ಉಪಚುನಾವಣೆಯ ರಣಕಣ ಈಗ ರಂಗೇರಿದೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್ ನಾಯಕರು ಅಧಿಕೃತವಾಗಿ ಪ್ರಚಾರದ ಕಣಕ್ಕಿಳಿದಿದ್ದು, ಉಸ್ತುವಾರಿ ಸಚಿವ ತಿಮ್ಮಾಪುರ ಅವರ ನೇತೃತ್ವದಲ್ಲಿ ಮತದಾರರ ಮನಗೆಲ್ಲುವ ಕಸರತ್ತು ಶುರುವಾಗಿದೆ.

ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭರ್ಜರಿ ಚುನಾವಣಾ ಚಟುವಟಿಕೆಗಳು ಆರಂಭವಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ನೇತೃತ್ವದಲ್ಲಿ ಇಂದು ನಗರದ ವಿದ್ಯಾಗಿರಿ ಹಾಗೂ ಬಿಟಿಡಿಎ ಪ್ರದೇಶಗಳಲ್ಲಿ ಬಿರುಸಿನ ಮನೆ ಮನೆ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಸಚಿವರಿಗೆ ಹಾರ ಹಾಕಿ, ಆರತಿ ಬೆಳಗುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಸಚಿವರಿಗೆ ಸಾಥ್ ನೀಡಿದ್ದು, ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಟ್ಟರು.

ಇನ್ನೊಂದೆಡೆ, ಬಾಯಕ್ಕ ಮೇಟಿ, ಸಂತೋಷ ಹೊಕ್ರಾಣಿ ಹಾಗೂ ಮಲ್ಲಿಕಾರ್ಜುನ ಮೇಟಿ ಅವರ ತಂಡಗಳು ಪ್ರತ್ಯೇಕವಾಗಿ ನೂರಾರು ಕಾರ್ಯಕರ್ತರೊಂದಿಗೆ ಕ್ಷೇತ್ರವಿಡೀ ಸಂಚರಿಸುತ್ತಿವೆ. ಪ್ರಚಾರದ ಉದ್ದಕ್ಕೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ಜಯಘೋಷಗಳು ಮೊಳಗಿದವು. ನೂರಾರು ಮಹಿಳಾ ಮತ್ತು ಪುರುಷ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದು, ಕಾಂಗ್ರೆಸ್ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಎದುರಾಳಿಗಳಿಗೆ ಭಾರೀ ಪೈಪೋಟಿ ನೀಡುತ್ತಿದೆ.

Tags:

error: Content is protected !!