ಶಿರೂರಿನ ಬಾಳು ದಾದು ಹಜಾರೆ ಅವರ ಹೆಲಿಕಾಪ್ಟರ್ ಬೈಜ್ಯಾ ಮತ್ತು ಬ್ರೇಕ್‌ಫೇಲ್ ಬೈಜ್ಯಾ ಪ್ರಥಮ ಸ್ಥಾನ ಪಡೆದು 5 ಲಕ್ಷ ರೂಪಾಯಿ ನಗದು ಬಹುಮಾನ

ಚಿಕ್ಕೋಡಿ:ಕೃಷಿ ಉತ್ಸವದ ಅಂಗವಾಗಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಲಿ.,ಸಂಯುಕ್ತ ಸಹಯೋಗದಲ್ಲಿ ಹಾಲಸಿದ್ಧನಾಥ ಕಾರ್ಖಾನೆ ಸ್ಥಳದಲ್ಲಿ ಭವ್ಯ ಕೃಷಿ ಉತ್ಸವ ಪ್ರಾರಂಭವಾಗಿದೆ.ಭವ್ಯ ಎತ್ತಿನಗಾಡಿ ಸ್ಪರ್ಧೆಯಲ್ಲಿ ಶಿರೂರಿನ ಬಾಳು ದಾದು ಹಜಾರೆ ಅವರ ಹೆಲಿಕಾಪ್ಟರ್ ಬೈಜ್ಯಾ ಮತ್ತು ಬ್ರೇಕ್‌ಫೇಲ್ ಬೈಜ್ಯಾ ಪ್ರಥಮ ಸ್ಥಾನ ಪಡೆದು ೫ ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿವೆ. ಲಕ್ಷಾಂತರ ಸ್ಪರ್ಧಾ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಈ ಸ್ಪರ್ಧೆಗಳು ಬೆನಾಡಿಯ ಮೈದಾನದಲ್ಲಿ ಕಡುಬಿಸಿಲಿನ ನಡುವೆಯೂ ಜನಸಂದಣಿಯಿಂದ ಕಂಗೊಳಿಸಿತು. ವಿಜೇತರಿಗೆ ಪ.ಪು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಪ್ರಾಣಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಬಿಡಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ್ ಜೊಲ್ಲೆ, ಬಸವಪ್ರಸಾದ್ ಜೊಲ್ಲೆ ಹಾಗೂ ಗಣ್ಯರ ವತಿಯಿಂದ ಬಹುಮಾನ ವಿತರಿಸಲಾಯಿತು.
ಇನ್ನೂ ಲಿಂಗನೂರಿನ ಅಜಿ0ಕ್ಯ ಕೊಪಾರ್ಡೆ ಅವರ ಬೈಜ್ಯಾ ಮತ್ತು ಶಿವರ್ಯಾ ಎತ್ತಿನ ಗಾಡಿಯು ದ್ವಿತೀಯ ಸ್ಥಾನ ಪಡೆದು ೩ ಲಕ್ಷ ರೂಪಾಯಿ,ತೃತೀಯ ಸ್ಥಾನವನ್ನು ಶಶಿಕಾಂತ್ ಜಾಧವ ಬೆಳಂಕೆ ಅವರ ಎತ್ತಿನ ಗಾಡಿಯು ಪಡೆದು ೨ ಲಕ್ಷ ರೂಪಾಯಿ ಬಹುಮಾನ ಪಡೆದಿತು. ಜನರಲ್ ಬಿ ಗುಂಪಿನ ಎತ್ತಿನಗಾಡಿಯ ಸ್ಪರ್ಧೆಯಲ್ಲಿ ಸಂದೀಪ ಪಾಟೀಲ್ ಕೊಲ್ಹಾಪುರ ಅವರ ವಶ್ಯಾ ಮತ್ತು ಹರಣ್ಯಾ ಪ್ರಥಮ ಸ್ಥಾನ ಪಡೆದು ೨ ಲಕ್ಷ ರೂಪಾಯಿ, ದ್ವಿತೀಯ ಸ್ಥಾನವನ್ನು ಪ್ರವೀಣ್ ರೋಡೆ ಎರಂಡೋಳಿ ಅವರ ಗಾಡಿ ೧ ಲಕ್ಷ ರೂಪಾಯಿ, ತೃತೀಯ ಸ್ಥಾನವನ್ನು ಬಂಡಾ ಖಿಲಾರೆ ದಾನೋಳಿ ಅವರ ಎತ್ತಿನಗಾಡಿಯು ಪಡೆದಿತು. ಜನರಲ್ ಒಂದು ಎತ್ತು ಒಂದು ಕುದುರೆ ‘ಅ’ ಗುಂಪಿನ ಸ್ಪರ್ಧೆಯಲ್ಲಿ ಮಾನಕಾಪೂರದ ಬಾಳು ಬಟ್ಟೆ ಅವರ ಗಾಡಿ ಪ್ರಥಮ ಸ್ಥಾನ ಪಡೆದು ೫೦ ಸಾವಿರ ರೂಪಾಯಿ, ದ್ವಿತೀಯ ಸ್ಥಾನವನ್ನು ಕಾಕೇಶ್ ಚೌಗುಲೆ, ಆಷ್ಟಾ ಅವರ ಗಾಡಿ ೩೦ ಸಾವಿರ ರೂಪಾಯಿ ಹಾಗೂ ತೃತೀಯ ಸ್ಥಾನವನ್ನು ಅತೂಲ್ ಪಾಟೀಲ್, ಕೌಲಾಪುರ ಅವರ ಗಾಡಿ ೨೦ ಸಾವಿರ ರೂಪಾಯಿ ಬಹುಮಾನ ಪಡೆದಿತು. ಒಂದು ನೌತರ ಒಂದು ಜನರಲ್ ಕುದುರೆಗಾಡಿ ಸ್ಪರ್ಧೆಯಲ್ಲಿ ಸಮೀರ್ ಮುಲ್ಲಾ ಡಿಗ್ರಜ್ ಅವರ ಗಾಡಿ ಪ್ರಥಮ ಸ್ಥಾನ ಪಡೆದು ೨೫ ಸಾವಿರ ರೂಪಾಯಿ, ದ್ವಿತೀಯ ಸ್ಥಾನವನ್ನು ಬಸೌಂಡಾ ಪಾಟೀಲ್ ಬೆನಾಡಿ ಅವರ ಗಾಡಿ ೧೫ ಸಾವಿರ ರೂಪಾಯಿ ಹಾಗೂ ಕಿಶೋರ್ ಪುಜಾರಿ ಅವರ ಗಾಡಿ ತೃತೀಯ ಸ್ಥಾನ ಪಡೆದು ೧೦ ಸಾವಿರ ರೂಪಾಯಿ ಬಹುಮಾನ ಪಡೆದಿತು. ಒಂದು ದೂಸಾ ಮತ್ತು ಒಂದು ಚೌಸಾ ಎತ್ತುಬಂಡಿ ಸ್ಪರ್ಧೆಯಲ್ಲಿ ಧುಳಗಾಂವಿನ ಬಾಳು ಸರ್ಕಾರ ಅವರ ಗಾಡಿ ಪ್ರಥಮ ಸ್ಥಾನ ಪಡೆದು
೫೦ ಸಾವಿರ ರೂಪಾಯಿ, ದ್ವಿತೀಯ ಸ್ಥಾನವನ್ನು ಸಂತೋಷ ಪಂಡಾರೆ, ಶಿಂಗಣಾಪುರ ಅವರ ಗಾಡಿ ೩೦ ಸಾವಿರ ರೂಪಾಯಿ ಹಾಗೂ ಬಂಡಾ ಖಿಲಾರೆ ಅವರ ಗಾಡಿ ತೃತೀಯ ಸ್ಥಾನ ಪಡೆದು ೨೦ ಸಾವಿರ ರೂಪಾಯಿ ಬಹುಮಾನ ಪಡೆದಿತು.
ಈ ವೇಳೆ ಮಾತನಾಡಿದ ಕನೆರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು, ಇದು ರೈತರ ಉತ್ಸವವಾಗಿದ್ದು, ಉತ್ತಮ ಜಾನುವಾರುಗಳನ್ನು ಬೆಳೆಸುವುದು ಮತ್ತು ಅವಗಳನ್ನು ಸಂರಕ್ಷಿಸುವ ಹವ್ಯಾಸ ಸ್ಪರ್ಧೆಗಳ ಮೂಲಕ ಉಳಿಯುತ್ತದೆ. ೨೧ನೇ ಶತಮಾನದಲ್ಲಿ ಎತ್ತುಗಳನ್ನು ಸಾಕುವುದು ಎಂದರೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವಾಗಿದೆ. ರೈತರಿಗೆ ಪ್ರೇರಣೆ ದೊರಕಲು ಈ ಸ್ಪರ್ಧೆ ಉತ್ತಮ ಉತ್ಸವವಾಗಿದೆ ಎಂದು ಹೇಳಿದರು. ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ರೈತರು ದೇಶದ ಆಧಾರಸ್ತಂಭ. ಕೃಷಿಗೆ ಗ್ರಾಮೀಣ ಭಾಗ ಬಹಳ ಮುಖ್ಯವಾಗಿದೆ.
ಜಾನುವಾರುಗಳು ಮತ್ತು ಪಕ್ಷಿಗಳನ್ನು ಸಾಕುವ ಕೆಲಸವನ್ನು ರೈತರು ಮಾಡುತ್ತಾರೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರು ಮತ್ತು ಸೈನಿಕರಿಗೆ ದೊಡ್ಡ ಮಹತ್ವ ನೀಡಿತ್ತಾ ಅವರಿಗಾಗಿ ಉತ್ತಮ ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಅತ್ಯಂತ ಭವ್ಯವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯ ಆರಂಭದಲ್ಲಿ ಬಸವಪ್ರಸಾದ್ ಜೊಲ್ಲೆ ಅವರು ಸ್ವಾಗತ ಭಾಷಣ ಮಾಡಿ ಮೊದಲ ಸ್ಪರ್ಧೆಗೆ ಧ್ವಜ ಚಾಲನೆ ನೀಡಿದರು. ಮೈದಾನದಲ್ಲಿ ಸೇರಿದ್ದ ಸಾವಿರಾರು ಜನರ ಸುರಕ್ಷಾತೆ ದೃಷ್ಟಿಯಿಂದ ಅಲ್ಲಲ್ಲಿ ಬ್ಯಾರಿಕೆಡಗಳನ್ನು ಹಾಕಲಾಗಿತ್ತು.ಈ ವೇಳೆ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ. ಪಾಟೀಲ್, ಉಪಾಧ್ಯಕ್ಷ ಪವನ ಪಾಟೀಲ್, ನಿರ್ದೇಶಕರು, ಕರ್ನಾಟಕ ಆಯಿಲ್ ಫೆಡರೇಶನ್‌ನ ನಿರ್ದೇಶಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಪಿಎಸ್ಐ ರಮೇಶ್ ಪವಾರ್ ಹಾಗೂ ಶಿವರಾಜ ನಾಯಿಕವಾಡಿ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು
