ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಲ್ಲಿನ ಕನ್ನಡಿಗರು ಆತಂಕದಲ್ಲಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಸಚಿವ ಎಚ್.ಕೆ. ಪಾಟೀಲ್ ಬೆಂಗಳೂರಿನಲ್ಲಿ ಒತ್ತಾಯಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಇಸ್ರೇಲ್ ಮತ್ತು ಇರಾನ್ ಯುದ್ಧದ ಹಿನ್ನೆಲೆ ವಿವಿಧೆಡೆ ಕನ್ನಡಿಗರು ಸಿಲುಕಿ ಹಾಕಿಕೊಂಡಿದ್ದು, ಅವರನ್ನ ಸುರಕ್ಷಿತವಾಗಿ ಕರೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬೇಕು. ಭಾರತೀಯರನ್ನು ಯಾರೂ ಮುಟ್ಟಲಾರರು. ಭಾರತವು ಯಾರ ಪರವು ಅಲ್ಲ ವಿಶ್ವ ಶಾಂತಿಗಾಗಿ ನಿಂತವರು. ಎಲ್ಲ ಕನ್ನಡಿಗರು ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ ಎಂದರು. ನಮ್ಮ ದೇಶ ಪಂಚಶೀಲ ತತ್ವಗಳಲ್ಲಿ ವಿಶ್ವಾಸವಿಟ್ಟ ದೇಶ. ಶಾಂತಿಯತ್ತ ಒಲವು ತೋರುವವರಿಗೆ ಕೇಂದ್ರ ಸರ್ಕಾರ ಒಲವು ತೋರಬೇಕೆಂದರು. ಇದು ಮೋದಿ ಅವರ ಅಭಿಪ್ರಾಯದ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ ಎಂದರು.
ಶ್ರೀಮಂತ ರಾಷ್ಟ್ರಗಳು ಮನಬಂದಂತೆ ವರ್ತಿಸಿ ಆರ್ಥಿಕ ಶಕ್ತಿಯ ಮೇಲೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಲು ವೈರ ಮನೋಭಾವದಲ್ಲಿ ಹತ್ಯೆ ಮಾಡುತ್ತಿರುವುದು ಜಗತ್ತಿಗೆ ಬಂದ ಗಂಡಾಂತರವಾಗಿದೆ. ಅಶಾಂತಿಯನ್ನು ಹಬ್ಬಿಸುವವರು ಯಾರೇ ಆಗಿದ್ದರೂ ಅದನ್ನು ಭಾರತ ದೇಶ ಖಂಡಿಸುತ್ತದೆ. ಶಕ್ತಿ ಸಾಮರ್ಥ್ಯ ಎಷ್ಟೇ ಇದ್ದರೂ ಮನುಕುಲವನ್ನು ಶಾಂತಿಯುತವಾಗಿ ತೆಗೆದುಕೊಂಡು ಹೋಗುವ ಔದಾರ್ಯತೆ ಇರಬೇಕು. ನಮ್ಮ ದೇಶ ವಿಶ್ವ ಶಾಂತಿಯಾಗಿ ಹೋರಾಡುತ್ತಿದೆ. ಜಗತ್ತಿನಲ್ಲಿ ಮತ್ತೇ ವಿಶ್ವ ಶಾಂತಿ ಸ್ಥಾಪನೆಯಾಗಬೇಕೆಂದರು.
