BELAGAVI

ಪ್ರಧಾನಿ ನರೇಂದ್ರ ಮೋದಿಯವರ ದೃಢ ನಾಯಕತ್ವದಿಂದ ಭಾರತದ ಇಂಧನ ಭದ್ರತೆ ಸುರಕ್ಷಿತವಾಗಿದೆ: ಸಂಸದ ಈರಣ್ಣ ಕಡಾಡಿ

Share

ಇರಾನ್ ಮತ್ತು ಅಮೇರಿಕಾ, ಇಸ್ರೇಲ್ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ಇಡೀ ಜಗತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ದೇಶದಲ್ಲಿ ಕಾಂಗ್ರೆಸ್ ಪಕ್ಷವು ಗ್ಯಾಸ್ ಸಿಲಿಂಡರ್ ಸಂಬAಧ ಜನರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತೀವ್ರವಾಗಿ ಖಂಡಿಸಿದ್ದಾರೆ.

ರವಿವಾರ ಮಾರ್ಚ್ -15 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತವು ಇಂದು ಕೇವಲ ಒಂದು ಮಾರ್ಗವನ್ನು ಅವಲಂಬಿಸದೆ, ರಷ್ಯಾ, ಕೆನಡಾ ಮತ್ತು ಅಮೆರಿಕದಂತಹ ಪರ್ಯಾಯ ಮೂಲಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಬರುತ್ತಿದ್ದ ಶೇ.40-50ರಷ್ಟು ಪೂರೈಕೆಗೆ ಧಕ್ಕೆಯಾಗದಂತೆ ಈಗಾಗಲೇ ಶೇ.70 ರಷ್ಟು ಕಚ್ಚಾತೈಲವನ್ನು ಪರ್ಯಾಯ ಮಾರ್ಗಗಳ ಮೂಲಕ ಸುರಕ್ಷಿತಗೊಳಿಸಲಾಗಿದೆ. ದೇಶದ 33 ಕೋಟಿ ಕುಟುಂಬಗಳ ಅಡುಗೆ ಮನೆಗೆ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಗೃಹಬಳಕೆಯ ಎಲ್.ಪಿ.ಜಿ ಪೂರೈಕೆಯನ್ನು ಶೇ.100 ಖಚಿತಪಡಿಸಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಬ್ಸಿಡಿ ಮತ್ತು ತೆರಿಗೆ ಹೊಂದಾಣಿಕೆಯ ಮೂಲಕ ಸಾಮಾನ್ಯ ಜನರ ಮೇಲೆ ಹೊರೆ ಬೀಳದಂತೆ ದೇಶದಲ್ಲಿ ಬೆಲೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗಿದೆ. ಎಲ್.ಪಿ.ಜಿ ಪೂರೈಕೆ ಕೊರತೆ ಆಗಲಿದೆ ಎಂಬ ಭಯದಿಂದ ಅಗತ್ಯವಿಲ್ಲದಿದ್ದರೂ ಹೆಚ್ಚು ಹೆಚ್ಚು ಬುಕಿಂಗ್ ಮಾಡಬೇಡಿ ಎಂದು ಈಗಾಗಲೇ ಕೇಂದ್ರ ಸಚಿವರಾದ ಹರ್ದಿಪ್ ಪುರಿ ಅವರು ಹೇಳಿದ್ದಾರೆ. ದೇಶದಲ್ಲಿ 5 ದಿನದಲ್ಲಿ ಶೇ 28̇ ರಷ್ಟು ಎಲ್.ಪಿ.ಜಿ ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚು ಮಾಡ್ತೇವೆ. ಆ ಸಾಮರ್ಥ ಭಾರತಕ್ಕೆ ಇದೆ ಎಂದು ವಿವರಿಸಿದರು.

ಬಿತ್ತನೆ ಹಂಗಾಮು ಹತ್ತಿರವಿರುವ ಈ ಸಮಯದಲ್ಲಿ ರೈತರಿಗೆ ಬೇಕಾದ ಗೊಬ್ಬರ ಕಾರ್ಖಾನೆಗಳಿಗೆ ಶೇ. 70ರಷ್ಟು ಗ್ಯಾಸ್ ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ. ಇಂತಹ ಸೂಕ್ಷ್ಮ, ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ದೇಶದ ಏಕತೆ ಕಾಯ್ದುಕೊಂಡು, ಕೇಂದ್ರ ಸರ್ಕಾರಕ್ಕೆ ಸಾಥ್ ನೀಡುವ ಬದಲು, ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅನಗತ್ಯ ಹೇಳಿಕೆ ನೀಡಿ, ಜನರನ್ನು ಅನಗತ್ಯವಾಗಿ ಆತಂಕಗೊಳಿಸುವAತೆ ಪ್ರತಿಭಟನೆಗಳನ್ನು ನಡೆಸಿ, ಕೀಳು ರಾಜಕೀಯ ನಡೆಸುತ್ತಿದೆ ಎಂದು ಸಂಸದ ಈರಣ್ಣ ಕಡಾಡಿ ತೀವ್ರವಾಗಿ ಹರಿಹಾಯ್ದಿದ್ದಾರೆ.

Tags:

error: Content is protected !!