ಕಾಗವಾಡ ತಾಲೂಕಿನ ಎಸ್ ಎಸ್ ಎಲ್ ಸಿ 2511 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸ್ಪರ್ಧಿಸಲಿದ್ದಾರೆ. ಸಕಲಿಸಿದ್ಧತೆ ಮಾಡಿಕೊಂಡಿದ್ದು ಈ ವರ್ಷ ಒಳ್ಳೆಯ ಫಲಿತಾಂಶ ಲಭಿಸಲಿದೆ ತಹಶೀಲ್ದಾರ್ ರವೀಂದ್ರ ಹಾದಿಮನಿ ಹೇಳಿದರು.
ಕಾಗವಾಡದ ಬಿ ಈ ಓ ಕಚೇರಿಯಲ್ಲಿ ಹಮ್ಮಿಕೊಂಡ
ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಬೇಜರಿಗಿತು.

ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಾಂಡುರಂಗ ಮಧಬಾವಿ
ಎಸ್ ಎಸ್ ಎಲ್ ಸಿ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡುವಾಗ
ತಾಲೂಕಿನಲ್ಲಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇದೇ ಮಾರ್ಚ್ 18 ರಿಂದ ಏಪ್ರಿಲ್ 2 ವರೆಗೆ ಜರುಗಲಿವೆ. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು 1269 ಗಂಡು,1242 ಹೆಣ್ಣು ಸೇರಿದಂತೆ ಒಟ್ಟು 2511 ವಿದ್ಯಾರ್ಥಿಗಳು 06 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ ತಿಳಿಸಿದರು.
ಎಸ್ ಎಸ್ ಎಲ್ ಸಿ . ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಸುವ್ಯವಸ್ಥಿತ ಮತ್ತು ಸುಸೂತ್ರವಾಗಿ ಶಾಂತಿಯುತವಾಗಿ ಪರೀಕ್ಷೆಗಳು ಜರುಗಲು ಎಲ್ಲ ರೀತಿಯಲ್ಲಿ ಕ್ರಮವನ್ನು ಕೈಕೊಳ್ಳಲಾಗಿದೆ. ಸಿ ಸಿ ಕ್ಯಾಮೆರಾ ಕಣ್ಗಾವಲಿನ ಜೊತೆಗೆ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಮಕ್ಕಳಿಗೂ ಪರೀಕ್ಷೆಯನ್ನು ಬರೆಯಲು ಅನುಕೂಲವಾಗುವಂತೆ ಆಸನಗಳ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಲಾಗಿದೆ.
ಕಾಗವಾಡ ತಾಲ್ಲೂಕಿನಲ್ಲಿ ಮಲ್ಲಿಕಾರ್ಜುನ ಮಹಾವಿದ್ಯಾಲಯ ಕಾಗವಾಡ,ಸಿದ್ದೇಶ್ವರ ವಿದ್ಯಾಲಯ ಶಿರಗುಪ್ಪಿ, ಸನ್ಮತಿ ವಿದ್ಯಾಲಯ ಶೇಡಬಾಳ,ಶ್ರೀಹರಿ ವಿದ್ಯಾಲಯ ಉಗಾರ ಖುರ್ದ,ಕೆಆರ್ ಇಎಸ್ ಐನಾಪೂರ, ಸಿದ್ದೇಶ್ವರ ವಿದ್ಯಾಲಯ ಮೋಳೆ, ಹೀಗೆ ಒಟ್ಟು 06 ಪರೀಕ್ಷಾ ಕೇಂದ್ರಗಳಿದ್ದು ,ಸುಮಾರು 105 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಪರೀಕ್ಷೆಗೆ 06 ಮುಖ್ಯ ಅಧೀಕ್ಷಕರು,06 ಉಪ ಅಧೀಕ್ಷಕರು,05 ಕಸ್ಟಡಿಯನ್,06 ಮೊಬೈಲ್ ಸ್ವಾಧೀನಾಧಿಕಾರಿಗಳು,06 ಸ್ಥಾನಿಕ ಜಾಗೃತ ದಳ,03 ಫ್ಲೈಯಿಂಗ್ ಸ್ಕ್ವಾಡ್, 41 ಸಿಬ್ಬಂದಿಗಳನ್ನ ನೇಮಿಸಲಾಗುವದು ಎಂದರು.
ಪಾರದರ್ಶಕವಾಗಿ, ಪಾವಿತ್ರ್ಯ ರಕ್ಷಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು.ಪರೀಕ್ಷಾ ಸುತ್ತಮುತ್ತಲಿರುವ ಝರಾಕ್ಸ್ ಕೆಂದ್ರಗಳನ್ನು ಬಂದ್ ಮಾಡುವಂತೆ ಸೂಚಿಸಬೇಕು.ಸುಸೂತ್ರವಾಗಿ ನಡೆಯುವ ಪರೀಕ್ಷೆಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು.ಸುಸೂತ್ರವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಒಬ್ಬರು ಸಿಎಚ್ಒ ಹಾಗೂ ಇಬ್ಬರೂ ಆಶಾಕರ್ತೆಯರನ್ನ ನೇಮಿಸಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲಾಗುವದು ತುರ್ತು ಸೇವೆಗಾಗಿ ಆಯಾ ಆಯಾ ವ್ಯಾಪ್ತಿಗೆ ಸಂಭಂಧಿಸಿದಂತೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುವದು
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ ಮಾತನಾಡಿ,ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನಲ್ಲಿ 200 ಮೀಟರದಲ್ಲಿ ಪ್ರದೇಶದಲ್ಲಿ ಸಾರ್ವಜನಿಕರು ಯಾರೂ ಅನಧಿಕೃತವಾಗಿ ಪ್ರವೇಶವನ್ನು ಮಾಡದಂತೆ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದಾರೆ. ತಾಲೂಕಿನಾದ್ಯಂತ 06 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಹಾಗೂ ವೆಬ್ ಕ್ಯಾಮರಾ ಅಳವಡಿಸಲಾಗಿದೆ, ಸಿಸಿ ಟಿವಿ ಫುಟೇಜ್ ಕಮೀಷನರ್ ಅವರೇ ಖುದ್ದಾಗಿ ನೋಡುತ್ತಾರೆ, ದಿನಾಂಕ ಮಾರ್ಚ್ 18 ರಿಂದ ಪ್ರಾರಂಭವಾಗುವ ಪರೀಕ್ಷೆಗಾಗಿ ಸುವ್ಯವಸ್ಥಿತ ಮತ್ತು ಶಾಂತಿಯುತವಾಗಿ ನಡೆಸುವ ವ್ಯವಸ್ಥೆ ಮಾಡಲಾಗಿದೆ, ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ಸಾರ್ವಜನಿಕರ ಅನಧಿಕೃತ ಪ್ರವೇಶ ನಿಷೇಧಿಸಲಾಗಿದೆ, ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ, ಬಂದೋ ಬಸ್ತ್ ಗಾಗಿ ಪೋಲಿಸ್ ಇಲಾಖೆ ಸಹಯೋಗದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಸೇರಿ ಶಾಂತ ರೀತಿಯಾಗಿ ಸುಗಮವಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಿಸ್ತಿನಿಂದ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ರಾಘವೇಂದ್ರ ಖೋತ,,ಸಿಡಿಪಿಓ ರವಿಂದ್ರ ಗುದಗೆನ್ನವರ,ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್,ದೈಹಿಕ ಪರೀವೀಕ್ಷಕರು ಎಮ್ ವಾಯ್ ಪೂಜೇರಿ,ಶಿಕ್ಷಣ ಸಂಯೋಜಕ ಭರತ ಬಿಲವಾಡೆ,ಬಿಆರ್ ಪಿಗಳಾದ ಬಿ .ಬಿ. ಟೊನಗೆ ,ರವೀಂದ್ರ ನಾಂದಣಿ,
ನಿರೂಪಿಸಿದರು.
ಎಸ್ಎಸ್ ಎಲ್ ಸಿ ನೂಡಲ್ ಅಧಿಕಾರಿ ಎಸ್ ಆರ್ ಮಾಳಿ,ಎಮ್ ವಿ ನಾಮದಾರ, ಮುಖ್ಯ ಅಧೀಕ್ಷಕರು,ಪ್ರಶ್ನೆ ಪತ್ರಿಕೆ ಪಾಲಕರು,ಸ್ಥಾನಿಕ ಜಾಗೃತ ದಳ,ಮೊಬೈಲ್ ಸ್ವಾಧಿನಾಧಿಕಾರಿಗಳು,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
