BELAGAVI

ಶಹಾಪುರದಲ್ಲಿ ಭಾವೈಕ್ಯತೆಯ ಇಫ್ತಿಯಾರ್ ಕೂಟ: ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ನವಿ ಗಲ್ಲಿ

Share

ಬೆಳಗಾವಿಯ ಶಹಾಪುರದಲ್ಲಿ ರಂಜಾನ್ ಮಾಸದ ಅಂಗವಾಗಿ ವಿಶೇಷ ಇಫ್ತಿಯಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ನವಿ ಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಈಫ್ತಾರ್ ಕೂಟದಲ್ಲಿ ಭಾಗಿಯಾಗುವ ಮೂಲಕ ಭಾವೈಕ್ಯತೆಯ ವಿಶಿಷ್ಟ ಸಂದೇಶವನ್ನು ಸಾರಿದರು.

ಶಹಾಪುರದ ನಾವಿ ಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಭಾರತನಗರದ ಯಂಗ್ ಕಮೀಟಿ ಮತ್ತು ಪಂಚ ಕಮೀಟಿ ವತಿಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಇಫ್ತಿಯಾರ್ ಕೂಟವು ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾಯಿತು. ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಪರಸ್ಪರರ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ರಂಜಾನ್ ಇಫ್ತಿಯಾರ್‌ನಲ್ಲಿ ಹಿಂದೂ ಬಾಂಧವರು ಹಾಗೂ ಗಣೇಶೋತ್ಸವದಂತಹ ಸಂದರ್ಭಗಳಲ್ಲಿ ಮುಸ್ಲಿಂ ಬಾಂಧವರು ಕೈಜೋಡಿಸುವ ಮೂಲಕ ಇಡೀ ಬೆಳಗಾವಿ ನಗರಕ್ಕೆ ನಾವಿ ಗಲ್ಲಿ ಮಾದರಿಯಾಗಿದೆ ಎಂದು ಸಂಘಟಕರು ಮತ್ತು ಸ್ಥಳೀಯ ಮುಖಂಡರು ಹೆಮ್ಮೆಯಿಂದ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಶಹಾಪುರ ಸಿಪಿಐ ಸೀಮಾನಿ, ಮಾಜಿ ಮಹಾಪೌರ ನೇತಾಜಿ ಜಾಧವ್, ನಗರಸೇವಕರಾದ ರವಿ ಸಾಳುಂಕೆ, ರಮೇಶ್ ಸೋಂಟಕ್ಕಿ ಸೇರಿದಂತೆ ಪ್ರಮುಖರಾದ ಅಮ್ಜದ್ ಮೋಮಿನ್, ಅಬ್ದುಲ್ ಬಾಗಲಕೋಟೆ, ಸಾದಿಕ್ ಕೋತ್ವಾಲ್, ಜಾಕೀರ್ ಕಣಬರ್ಗಿ, ಮಹಾದೇವ ಪಾಟೀಲ್ ಹಾಗೂ ಸತೀಶ್ ಪಾಟೀಲ್ ಭಾಗವಹಿಸಿದ್ದರು.

ನಗರ ಸೇವಕ ರವಿ ಸಾಳುಂಕೆ ಅವರು ನವಿ ಗಲ್ಲಿಯ ಹಿಂದೂ ಮುಸ್ಲಿಂ ಬಾಂಧವರು ಕಳೆದ ಹಲವಾರು ವರ್ಷಗಳಿಂದ ಎಲ್ಲ ಹಬ್ಬ ಉತ್ಸವಗಳನ್ನು ಒಟ್ಟಾಗಿ ಆಚರಿಸುತ್ತೇವೆ. ಪ್ರತಿ ವರ್ಷ ಈಫ್ತಾರ್ ಕೂಟದಲ್ಲಿ ಹಿಂದೂ ಬಾಂಧವರು ಮತ್ತು ಗಣೇಶೋತ್ಸವದಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗುತ್ತಾರೆ. ಎಲ್ಲ ಜಾತಿ ಧರ್ಮದ ಹಬ್ಬ ಉತ್ಸವಗಳನ್ನು ಸೌಹಾರ್ದತೆಯಿಂದ ಆಚರಿಸಲಾಗುತ್ತದೆ ಎಂದರು.

ನಾಮನಿರ್ದೇಶಿತ ಸದಸ್ಯ ರಮೇಶ್ ಸೋಂಟಕ್ಕಿ ಅವರು ನವಿ ಗಲ್ಲಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹಿಂದೂ ಮುಸ್ಲಿಂ ಬಾಂಧವರು ಕೂಡಿಕೊಂಡು ಈ ಈಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ. ಇಲ್ಲಿ ಎಲ್ಲ ಹಿಂದೂ ಮುಸ್ಲಿಂ ಬಾಂಧವರು ಕೂಡಿಕೊಂಡು ಎರಡು ಧರ್ಮದ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸುತ್ತೇವೆ ಎಂದರು.

ಮಾಜಿ ನಗರಸೇವಕ ನೇತಾಜೀ ಜಾಧವ್ ಅವರು ಜನಪ್ರತಿನಿಧಿಗಳು ಮತ್ತು ಹಿಂದೂ ಮುಸ್ಲಿಂ ಬಾಂಧವರು ಇಂದು ಪ್ರತಿವರ್ಷದಂತೆ ಈಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹಿಂದೂ ಮುಸ್ಲಿಂ ಬಾಂಧವರು ಯಾವುದೇ ಬೇಧಭಾವ ಮಾಡದೇ, ಪರಸ್ಪರ ಹಬ್ಬಗಳಲ್ಲಿ ಭಾಗಿಯಾಗಿ ಸೌಹಾರ್ದತೆಯನ್ನು ತೋರುತ್ತೇವೆ. ಪ್ರತಿಯೊಂದು ಉತ್ಸವವು ಶಾಂತಿ ರೀತಿಯಿಂದ ಆಚರಿಸಲಾಗುತ್ತದೆ. ನವಿ ಗಲ್ಲಿಯ ಈ ಪರಂಪರೆ ಎಲ್ಲೆಡೆ ಮಾದರಿಯಾಗಿದೆ ಎಂದರು.

ಬೆಳಗಾವಿಯ ಶಹಾಪುರ ನವಿ ಗಲ್ಲಿಯ ಜುಮ್ಮಾ ಮಸೀದಿಯಲ್ಲಿ ಭಾರತನಗರದ ಯಂಗ್ ಕಮೀಟಿ ಮತ್ತು ಪಂಚ ಕಮೀಟಿ ವತಿಯಿಂದ ಈಫ್ತಾರ್ ಕೂಟವನ್ನು ಆಯೋಜಿಸಲಾಗಿದ್ದು, ಹಿಂದೂ ಮುಸ್ಲಿಂ ಬಾಂಧವರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಅಲ್ಲದೇ ಈ ಭಾಗದ ನಗರಸೇವಕರು ನಮ್ಮ ಆಮಂತ್ರಣವನ್ನು ಗೌರವಿಸಿ ಭಾಗಿಯಾಗಿ ಸೌಹಾರ್ದತೆಯ ಸಂದೇಶವನ್ನು ನೀಡಿದ್ದಾರೆಂದು ಸಾಧೀಕ್ ಕೋತ್ವಾಲ್ ಹೇಳಿದರು.

ಮಹಾದೇವ ಪಾಟೀಲ್ ಅವರು ರಮಜಾನ್ ನಿಮಿತ್ಯ ನವಿ ಗಲ್ಲಿ ಶಹಾಪುರದ ಜಾಮೀಯಾ ಮಸೀದಿಯ ವತಿಯಿಂದ ಪ್ರತಿವರ್ಷ ಜಾತಿಧರ್ಮದ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ರಮಜಾನ್ ಹಬ್ಬದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಇಫ್ತಾರ್ ಕೂಟವನ್ನು ಆಯೋಜಿಸಲಾಗುತ್ತದೆ. ಸಂಪೂರ್ಣ ಬೆಳಗಾವಿಗೆ ನವಿ ಗಲ್ಲಿ ಒಂದು ಮಾದರಿಯ ಸಂದೇಶವಾಗಿದೆ ಎಂದರು.

Tags:

error: Content is protected !!