ಖಾನಾಪೂರ ಪಟ್ಟಣದಲ್ಲಿ ಯುವ ಮುಖಂಡ ಉದ್ಯಮಿ ರಾಯಲ್ ಕಿಚನ್ ಮಾಲಿಕ ಆಲೀಮ್ ಅಕ್ತರ್ ನಾಯಿಕ ಇವರಿಂದ ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು ಖಾನಾಪೂರ ತಾಲೂಕಿನ ಸಮರ್ಥ ಹಿಂದೂ ಮುಸ್ಲಿಂ ಬಾಂಧವರು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು ಅನೇಕತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಆಲೀಮ್ ಅಕ್ತರ್ ನಾಯಿಕ ಅವರು ಹಿಂದೂ ಮುಸ್ಲಿಂ ಬಾಂಧವರಿಗೆ ರಂಜಾನ್ ತಿಂಗಳ ನಿಮಿತ್ಯ ಭಾವೈಕ್ಯತೆಯ ಸಂಗಮ ಮಾಡಿ ಸಂಪೂರ್ಣ ಖಾನಾಪೂರ ತಾಲೂಕಿನಲ್ಲಿ ಏಕತೆಯನ್ನು ಸಾರಿದ್ದಾರೆ ಈ ಇಫ್ತಾರ್ ಕೂಟದಲ್ಲಿ ಬಹುಸಂಖ್ಯೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.


