ದಾವಣಗೆರೆ ಹಾಗೂ ಬಾಗಲಕೋಟಗಳ ಉಪ ಚುನಾವಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನಾಯಕತ್ವದ ಪರೀಕ್ಷೆಯಾಗಿ ನೋಡಲಾಗುತ್ತಿದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ವಿಜಯೇಂದ್ರ ನಾಯಕತ್ವ ಮುಂದುವರೆಯಲಿದೆ. ಆದರೆ ಸೋಲು ಕಂಡರೆ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಸಾಧ್ಯತೆ ಇದೆ ಎಂದರು.
ಇದೇ ವೇಳೆ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಟೀಕಿಸಿದ ಅವರು, ಯತ್ನಾಳ ಸ್ವಾಭಿಮಾನ ಇದ್ದರೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಸಬೇಕು ಎಂದು ಸವಾಲು ಹಾಕಿದರು. ಯತ್ನಾಳರನ್ನು ಬಿಜೆಪಿ ಪಕ್ಷದಿಂದ ದೂರ ಇಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಎಂ ಬಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
Vijaypura
ಶಾಸಕ ಯತ್ನಾಳಗೆ ಸ್ವಾಭಿಮಾನ ಇದ್ದರೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಸಬೇಕು: ಸಚಿವ ಎಂ ಬಿ ಪಾಟೀಲ ಸವಾಲು
