ಪತ್ನಿಗೆ ಸ್ನಾನಕ್ಕೆ ನೀರು ಇಡಲು ಹೇಳಿ ಹೊರಗಡೆ ಕಳುಹಿಸಿ ಪತಿ ಆತ್ಮಹತ್ಯೆಗೆ ಮಾಡಿಕೊಂಡು ಸಾವನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದಲ್ಲಿಂದು ಮುಂಹಾನೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಯತ್ನಳ್ಳಿ ಗ್ರಾಮದ ಅಭಿಶೇಕ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಗೆ ದುಡಿಯಲು ಬಂದಿದ್ದ ಅಭಿಷೇಕ ಕಳೆದ ಒಂದು ವರ್ಷದ ಹಿಂದೆ ಪ್ರೇಮ ವಿವಾಹವಾಗಿ ಗಾಮನಗಟ್ಟಿಯಲ್ಲಿ ಜೀವನ ನಡೆಸುತ್ತಿದ್ದನಂತೆ. ಇಂದು ಮುಂಜಾನೆ ಪತ್ನಿಗೆ ನಾನು ಸ್ನಾನ ಮಾಡಬೇಕು ಬುಸಿ ನೀರು ಕಾಯಿಸುವಂತೆ ಹೇಳಿದ್ದನಂತೆ. ಆಗ ಒತ್ನಿ ನೀರು ಕಾಯಿಸಲು ಹೊರಗಡೆ ಹೋದ ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಒಳಗೆ ಬರುವಷ್ಟರಲ್ಲಿ ನೇಣಿಗೆ ಪತಿ ನೇತಾಡುತ್ತಿರಯವುದನ್ನು ನೋಡಿ ಅಕ್ಕಪಕ್ಕದವರನ್ನು ಕರೆದು ಜೀವ ಉಳಿಸಲು ಪ್ರತ್ನಿಸುದರು, ಪ್ರಯೋಜನವಾಗಿಲ್ಲಂತೆ. ಸ್ಥಳೀಯರ ಮಾಹಿತಿ ಮೇರೆಗೆ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.
