Hukkeri

ಹುಕ್ಕೇರಿ : ಜಲ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ – ನ್ಯಾಯಾಧೀಶ ರಾಜಣ್ಣಾ.

Share

ಜಲ ಮತ್ತು ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ ಹೇಳಿದರು.
ಹುಕ್ಕೇರಿ ನಗರದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ ತಾಲೂಕು ಪಂಚಾಯತ ಮತ್ತು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುಕ್ಕೇರಿ ವತಿಯಿಂದ ವಿಶ್ವ ಜಲ ದಿನ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ವನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.

ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ ಮಾತನಾಡಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ ನೀರಿನ ಮಹತ್ವ ಮತ್ತು ರಕ್ಷಣೆ ಕುರಿತು ಜನರಲ್ಲಿ ಜಾಗ್ರತೆ ಮೂಡಿಸುವದು ಅವಶ್ಯವಾಗಿದೆ ಎಂದರು
ವೇದಿಕೆ ಮೇಲೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ,ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಹೋಳೆಪ್ಪಾ ಎಚ್, ಅಪರ ಸರಕಾರಿ ವಕೀಲ ಅನಿಲ ಕರೋಶಿ, ಎಸ್ ಜೆ ನದಾಫ್, ಶಿವಲಿಂಗ ತೇಲಿ,ಜ್ಯೋತಿ ಬಡನಾಳ ಉಪಸ್ಥಿತರಿದ್ದರು.
ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅರವಿಂದ ಅಣ್ಣಿಗೇರಿ ಗಣ್ಯರಿಗೆ ಸತ್ಕರಿಸಿ ಮಾತನಾಡಿ ನೀರು ಜೀವ ಜಲ ಎಂದು ಕತೆಯುತ್ತೆವೆ ನೀರಿಲ್ಲದೆ ಯಾವದೇ ಜೀವರಾಶಿ ಬದುಕುವದಿಲ್ಲಾ, ದೇಶ ಮತ್ತು ಜಗತ್ತಿನಲ್ಲಿ ಬದುಕುವ ಪ್ರತಿಯೊಬ್ಬರಿಗೂ ನೀರು ಅವಶ್ಯಕ ಕಾರಣ ನೀರನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಇಂದು ವಿಶ್ವ ಜಲ ದಿನ ಆಚರಿಸುತ್ತಿದ್ದೆವೆ ಎಂದರು

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ ನೀರು ಮತ್ತು ನಿಸರ್ಗ ಉಳುವಿಗಾಗಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಕಾರಣ ಸಾಕ್ಷರತೆ ಮೂಲಕ ನೀರನ್ನು ವ್ಯಯ ಮತ್ತು ಉಳಿಸುವ ಮಾರ್ಗಗಳನ್ನು ಜನರಲ್ಲಿ ತಿಳಿ ಹೇಳ ಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಾದ ಉದ್ಯೋಗ ಎಸ್ ಎಸ್ ಮಠದ, ಚೇತನ ಕಡಕೋಳ, ಸಂತೋಷ ಪಾಟೀಲ, ಅಭೀಷೇಕ ಪವಾರ, ನಾಗಯ್ಯಾ ಹಿರೇಮಠ ಮತ್ತು ನ್ಯಾಯವಾದಿಗಳಾದ ಆಶಾ ಸಿಂಗಾಡಿ, ಅನಿತಾ ಕುಲಕರ್ಣಿ ಹಾಗೂ ವಿವಿಧ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!