BELAGAVI

ಕೆಲಸಕ್ಕೆ ಹೋದ ಎಚ್.ಪಿ. ಗ್ಯಾಸ್ ಕಂಪನಿಯ ಉದ್ಯೋಗಿ ನಾಪತ್ತೆ, ಪತ್ತೆಗಾಗಿ ಕಾಕತಿ ಪೊಲೀಸರಿಂದ ಪ್ರಕಟಣೆ

Share

ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ನಿವಾಸಿಯೊಬ್ಬರು ಕೆಲಸಕ್ಕೆ ಹೋದವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಾಕತಿಯ ಎಚ್.ಪಿ. ಗ್ಯಾಸ್ ಗೊಡಾವನ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪಾ ಗಾಣಿಗೇರ ಎಂಬುವವರು ಕಾಣೆಯಾಗಿದ್ದು, ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ಕಂಗ್ರಾಳಿ ಕೆ.ಹೆಚ್. ಗ್ರಾಮದ ನಿಂಗಪ್ಪಾ ಪಕೀರಪ್ಪಾ ಗಾಣಿಗೇರ (38) ಎಂಬುವವರು ಕಳೆದ ಮಾರ್ಚ್ 19 ರಂದು ಬೆಳಿಗ್ಗೆ ಎಂದಿನಂತೆ ಕಾಕತಿಯ ತೇಜಸ್ವಿನಿ ಎಂಟರ್‌ಪ್ರೈಸಸ್ ಎಚ್.ಪಿ. ಗ್ಯಾಸ್ ಗೊಡಾವನ್‌ಗೆ ಕೆಲಸಕ್ಕೆ ಹೋಗಿದ್ದರು. ಆದರೆ ಅಲ್ಲಿ ಗೊಡಾವನ್ ಕೀಲಿಕೈಗಳನ್ನು ಟೇಬಲ್ ಮೇಲೆ ಇಟ್ಟು ಹೋದವರು ಮತ್ತೆ ವಾಪಸ್ ಬಂದಿಲ್ಲ ಎಂದು ಅವರ ತಾಯಿ ಕಮಲವ್ವಾ ಗಾಣಿಗೇರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿಯು 5 ಅಡಿ 4 ಇಂಚು ಎತ್ತರ, ಗೋದಿಗೆಂಪು ಮೈಬಣ್ಣ ಹಾಗೂ ಗುಂಡು ಮುಖ ಹೊಂದಿದ್ದು, ನಾಪತ್ತೆಯಾದ ಸಮಯದಲ್ಲಿ ಆಕಾಶ ಬಣ್ಣದ ಶರ್ಟ್ ಮತ್ತು ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ಕಾಕತಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0831-2405203 ಅಥವಾ ಮೊಬೈಲ್ ಸಂಖ್ಯೆ 9480804115/9480804083 ಗೆ ಸಂಪರ್ಕಿಸಲು ಕೋರಲಾಗಿದೆ.

Tags:

error: Content is protected !!