ಚಿಕ್ಕೋಡಿ: ಚಿಕ್ಕೋಡಿ ತಾಯಿ- ಮಕ್ಕಳ ಆಸ್ಪತ್ರೆಯ ಬಳಿ ರೋಗಿಗಳ ಸಂಬಂದಿಕರ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ನಡೆದಿದೆ.
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಇರುವ ತಾಯಿ-ಮಕ್ಕಳ ಆಸ್ಪತ್ರೆ ಬಳಿ ಇವತ್ತು ರೋಗಿಗಳ ಸಂಬಂದಿಕರ ಮೇಲೆ ಹೆಜ್ಜೇನು ದಾಳಿ ಮಾಡಿದೆ.ಹೆಜ್ಜೇನು ದಾಳಿ ಮಾಡಿದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಶಿರಹಟ್ಟಿ ಗ್ರಾಮದ ವಸಂತರಾವ ಹಾಲಟ್ಟಿ,ಸದಲಗಾ ಪಟ್ಟಣದ ಪವನ ಒಡ್ಡರ ಸೇರಿದಂತೆ ಇನ್ನಿತರ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ.ಹೆಜ್ಜೇನು ದಾಳಿಗೆ ಒಳಗಾದವರು ತಮ್ಮ ಸಂಬಂದಿಕರನ್ನು ಆಸ್ಪತ್ರೆಗೆ ಸೇರಿಸಿ,ಇವರು ಹೊರಗಡೆ ಬಂದು ನಿಂತಿದ್ದ ಸಂದರ್ಭದಲ್ಲಿ ಹೆಜ್ಜೇನು ದಾಳಿ ಮಾಡಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
