BELAGAVI

ಬೆಳಗಾವಿಯಲ್ಲಿ ‘ಹೊಂಬಾಳ್ ಕಪ್’ ಕ್ರಿಕೆಟ್ ಹಬ್ಬ: 11 ಜಿಲ್ಲೆಗಳ 14 ತಂಡಗಳ ನಡುವೆ ಜಿದ್ದಾಜಿದ್ದಿ!

Share

ಮಾ.28 ಹಾಗೂ 29ರವೆಗೆ ಜಿಮಖಾನ್ ಮೈದಾನದಲ್ಲಿ ಪ್ರಸಕ್ತ ಸಾಲಿನ ಹೊಂಬಾಳ್ ಕಪ್ 2025-26ರ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಬೆಳಗಾವಿ ವಲಯದ ಉಪಾಧ್ಯಕ್ಷ ಮಹಾಂತೇಶ್ ಗಾಡಿಗುಂಡಿ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕ್ರಿಕೆಟ್ ಪಂದ್ಯಾವಳಿಗೆ 11 ಜಿಲ್ಲೆಗಳಿಂದ 14 ತಂಡಗಳು ಆಗಮಿಸಲಿವೆ. ಮನುಷ್ಯನ ಆರೋಗ್ಯಕ್ಕೆ ಕ್ರಿಕೆಟ್ ಕ್ರೀಡೆ ಸಹಕಾರಿಯಾಗಿದ್ದು,ಪ್ರತಿ ಎರಡು ವರ್ಷಕ್ಕೊಮ್ಮೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದೇವೆ ಎಂದರು.

ತೋರಪ್ಪ ಮಾಳಗೆ ಮಾತನಾಡಿ, ಹೊಂಬಾಳ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ಡಿಸಿಪಿ ನಾರಾಯಣ ಬರಮನಿ ಹಾಗೂ ಮುರುಘೇಂದ್ರಗೌಡ ಪಾಟೀಲ್ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

Tags:

error: Content is protected !!