State

ಶೀಘ್ರದಲ್ಲೇ ಪಂಚಾಯತ್ ಚುನಾವಣೆಗಳನ್ನು ಮಾಡಿ

Share

ರಾಜ್ಯದಲ್ಲಿ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರವಾಗಿ ನಡೆಸುವಂತೆ ಆಗ್ರಹಿಸಿರುವ ಸದಸ್ಯ ಹನುಮಂತ ನಿರಾಣಿ, ಈ ಬಾರಿ ಬ್ಯಾಲೆಟ್ ಪೇಪರ್ ಬದಲಿಗೆ ಇವಿಎಂ ತಂತ್ರಜ್ಞಾನ ಬಳಸುವಂತೆ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ಹಳೆಯ ಪದ್ಧತಿಗೆ ಅಂಟಿಕೊಳ್ಳುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಹಣುಮಂತ ನಿರಾಣಿ ಅವರು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ 2026ರ ವಿಧೇಯಕ ಸಂಖ್ಯೆ 3 ರನ್ನು ಇನ್ನಷ್ಟು ತಿದ್ದುಪಡಿಗೊಳಿಸಿ ಅಂಗೀಕರಿಸಲು ಆಗ್ರಹಿಸಿದರು. ರಾಜೀವ ಗಾಂಧಿ ಅವರ ಕಾಲದಲ್ಲೇ ಇವಿಎಂ ಆರಂಭಿಸುವ ಯೋಚನೆಯಿತ್ತು. ಇವಿಎಂ ಬಳಕೆಯಿಂದ ಅಧಿಕಾರಗಳ ಸಂಖ್ಯೆ ತಗ್ಗಿಸಲು ಮತ್ತು ಮತ ಎಣಿಕೆಯನ್ನು ಶೀಘ್ರದಲ್ಲೇ ಪಡೆಯಲೂ ಪೂರಕವಾಗಿದೆ. ಅಲ್ಲದೇ ಆರ್ಥಿಕವಾಗಿಯೂ ಅನೂಕೂಲವಾಗುತ್ತದೆ. ಕಾಲಘಟ್ಟ ಬದಲಾಗಿದ್ದು, ತಂತ್ರಜ್ಞಾನ ಯುಗದಲ್ಲಿ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ಮಾಡಬೇಕೆನ್ನುವ ನಿರ್ಧಾರ ಸೂಕ್ತವಲ್ಲ ಎಂದರು. ಇವಿಎಂ ಗಳ ಬಗ್ಗೆ ಲೋಪದೋಷಗಳಿದ್ದರೇ, ನ್ಯೂನ್ಯತೆಗಳಿದ್ದರೇ, ಅದರನ್ನು ಪ್ರಾಯೋಗಿಕವಾಗಿ ಸರಿಪಡಿಸುವ ಕೆಲಸವನ್ನು ಮಾಡಬೇಕು. ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ನಡೆಯದೇ 8 ವರ್ಷಗಳಾಗಿವೆ. ಆಡಳಿತ ವಿಕೇಂದ್ರಿಕರಣ ಮಾಡಿ ಒಳ್ಳೆಯ ಆಡಳಿತ ಕೊಡಲು ಎಳ್ಳು ನೀರು ಬಿಟ್ಟಂತಾಗಿದ್ದು, ಶೀಘ್ರದಲ್ಲೇ ಗ್ರಾಮ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಚುನಾವಣೆಗಳನ್ನು ಮಾಡಬೇಕೆಂದರು.

Tags:

error: Content is protected !!