ಬೆಳಗಾವಿಯ ನಗರ ಉಪ ವಿಭಾಗ 3ರಲ್ಲಿ ಇಂದು ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶ್ವಿನ್ ಶಿಂದೆ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಯಿತು.
ದಿನಾಂಕ 23-03-2026ರ ಸೋಮವಾರ ಸಾಯಂಕಾಲ 3 ಗಂಟೆಗೆ ನಗರ ಉಪ ವಿಭಾಗ 3ರ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶ್ವಿನ್ ಶಿಂದೆ ಅವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಕುಂದುಕೊರತೆ ಸಭೆ ನಡೆಯಿತು. ಸಭೆಯಲ್ಲಿ ನಗರಸೇವಕ ದಿನೇಶ್ ನಾಶಿಪುಡಿ, ನಿವೃತ್ತ ನ್ಯಾಯಾಧೀಶ ಒಡಿಯರ್, ಮಾಜಿ ನಗರಸೇವಕ ರಸೂಲ್ಲಾ ಮುಲ್ಲಾ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಹಕರು ಮುಖ್ಯವಾಗಿ ವಿದ್ಯುತ್ ಮಾಪಕಗಳ (ಮೀಟರ್) ದೋಷ, ಬಿಲ್ಲಿಂಗ್ ಸಮಸ್ಯೆ ಹಾಗೂ ಸೈಬರ್ ಕ್ರೈಂಗೆ ಸಂಬಂಧಿಸಿದ ದೂರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಹ್ಯಾದ್ರಿ ನಗರದ ಟವರ್ ವಿಚಾರವಾಗಿ ವಕೀಲ ಪಾಟೀಲ್ ಅವರು ಚರ್ಚಿಸಿದರು.
ಸಭೆಯಲ್ಲಿ ಹಾಜರಿದ್ದ ಕಂದಾಯ ಶಾಖಾಧಿಕಾರಿಗಳು ಹಾಗೂ ಕಿರಿಯ ಅಭಿಯಂತರರು ಗ್ರಾಹಕರ ಪ್ರಶ್ನೆಗಳಿಗೆ ತಾಂತ್ರಿಕವಾಗಿ ಉತ್ತರಿಸಿದರು. ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗಿದ್ದು, ಬಾಕಿ ಉಳಿದ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಶ್ವಿನ್ ಶಿಂದೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೈಬರ್ ಕ್ರೈಂ ವಂಚನೆಗಳ ಬಗ್ಗೆ ಜಮೀನ್ ಅವರು ಎತ್ತಿದ ದೂರಿನ ಬಗ್ಗೆಯೂ ಸಭೆಯಲ್ಲಿ ಗಂಭೀರವಾಗಿ
ಚರ್ಚಿಸಲಾಯಿತು. ಉದ್ಯಮಿ ಭಂಡಾರಿ, ವಕೀಲರಾದ ಚವ್ಹಾಣ್ ಹಾಗೂ ವಿದ್ಯುತ್ ಗುತ್ತಿಗೆದಾರ ಇಸ್ಮಾಯಿಲ್ ಭಾಬು ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಹಕರು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು
