Vijaypura

ಮನಕಲುಕುವ ದುರಂತ: ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ

Share

ತಾಯಿ ತನ್ನ ಮೂವರು ಚಿಕ್ಕ ಮಕ್ಕಳನ್ನು ಬಾವಿಗೆ ಎಸೆದು, ಬಳಿಕ ತಾನೂ ಅದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯೊಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ನಡೆದಿದೆ. 28 ವರ್ಷದ ರಾಜಶ್ರೀ ಶಂಕ್ರಪ್ಪ ಹಳ್ಳೂರ ಎಂಬ ಮಹಿಳೆ, ತನ್ನ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷ (1) ಅವರನ್ನು ಬಾವಿಗೆ ಎಸೆದು ಬಳಿಕ ತಾನೂ ಜೀವತ್ಯಾಗ ಮಾಡಿದ್ದಾಳೆ. ಘಟನೆ ಸಂಭವಿಸಿದ ವೇಳೆ ಆಕೆಯ ಪತಿ ಶಂಕ್ರಪ್ಪ ಊರಲ್ಲಿ ಇರಲಿಲ್ಲ. ಅವರು ಖಾಸಗಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಘಟನೆ ತಿಳಿದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಗಮಿಸಿದ ನಂತರ, ಪೊಲೀಸರು ಬಾವಿಯಿಂದ ನಾಲ್ವರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಇಂಡಿ ತಾಲೂಕು ಆಸ್ಪತ್ರೆಗೆ ರವಾನಿಸಿದರು. ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಶಂಕ್ರಪ್ಪ ತಮ್ಮ ಪತ್ನಿಯೇ ಮಕ್ಕಳ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ. ಮತ್ತೊಂದೆಡೆ, ರಾಜಶ್ರೀಯ ತವರು ಮನೆಯವರು ಇದನ್ನು ಆತ್ಮಹತ್ಯೆ ಪ್ರಕರಣವೆಂದು ಹೇಳಿಕೆ ನೀಡಿದ್ದಾರೆ. ಆಸ್ತಿ ಸಂಬಂಧಿತ ವಿಚಾರವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ. ಆದರೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಮಾತ್ರ ತಿಳಿಯಬೇಕಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!